ಮುಸ್ಲಿಮರ ಗೌರವಾನ್ವಿತ ಪ್ರವಾದಿವಾರ್ಯರ ಬಗ್ಗೆ ವ್ಯಂಗ್ಯ ರೇಖಾಚಿತ್ರ ರಚಿಸಿದ್ದ ಸ್ವೀಡನ್ ನ ವಿಕೃತ ಕಲಾವಿದ ಲಾರ್ಸ್ ವಿಲ್ಕ್ಸ್ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.
ಪ್ರವಾದಿ ಮಹಮದ್ ಅವರ ವ್ಯಂಗ್ಯ ರೇಖಾ ಚಿತ್ರ ರಚಿಸುವ ಮೂಲಕ ವಿಕೃತಿ ಮೆರೆದಿದ್ದ ಸ್ವೀಡಿಶ್ ವ್ಯಂಗ್ಯಚಿತ್ರಕಾರ ಲಾರ್ಸ್ ವಿಲ್ಕ್ಸ್, ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂದು ಸ್ವೀಡನ್ ಮಾಧ್ಯಮಗಳನ್ನು ಆಧರಿಸಿ ‘ವಾಷಿಂಗ್ಟನ್ ಟೈಮ್ಸ್’ ವರದಿ ಮಾಡಿದೆ.
75 ವರ್ಷ ವಯಸ್ಸಿನ ವಿಕೃತ ಕಲಾವಿದ ವಿಲ್ಕ್ಸ್ ಪೊಲೀಸ್ ರಕ್ಷಣೆಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಂದು ತಿಳಿದು ಬಂದಿದೆ. ದಕ್ಷಿಣ ಸ್ವೀಡನ್‌ನ ಮಾರ್ಕರಿಡ್ ಪಟ್ಟಣದ ಬಳಿ ಭಾನುವಾರ ಅಪಘಾತ ಸಂಭವಿಸಿದೆ. ಲಾರ್ಸ್ ವಿಲ್ಕ್ಸ್ ಮೃತ ಪಟ್ಟಿರುವುದನ್ನು ಆತನ ಸಂಗಾತಿ ದೃಢಪಡಿಸಿದ್ದಾರೆ ಎಂದು ಸ್ಥಳೀಯ ದೈನಿಕ ಹೇಳಿದೆ.
ದಕ್ಷಿಣ ಸ್ವೀಡನ್‌ನ ಮಾರ್ಕರಿಡ್ ಪಟ್ಟಣದ ಬಳಿ ಇ 4 ಹೆದ್ದಾರಿಯಲ್ಲಿ ಕಾರು ಪ್ರಯಾಣಿಸುತ್ತಿದ್ದಾಗ ಮಧ್ಯಾಹ್ನ ಅಪಘಾತ ಸಂಭವಿಸಿತ್ತು ಎನ್ನಲಾಗಿದೆ. ವಿಲ್ಕ್ಸ್ ಮತ್ತು ಆತನಿಗೆ ರಕ್ಷಣೆ ನೀಡುತ್ತಿದ್ದ ಪೊಲೀಸ್ ರಕ್ಷಣಾ ಕಾರಿಗೆ ಡಿಕ್ಕಿ ಹೊಡೆಯುವ ಮೊದಲು ಟ್ರಕ್ ಒಂದು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿತ್ತು. ಆ ಬಳಿಕ ಆ ಟ್ರಕ್ ವಿಲ್ಸ್ ಇದ್ದ ಕಾರಿಗೆ ಢಿಕ್ಕಿ ಹೊಡೆದಿದೆ.
ವಿಕೃತ ಕಲಾವಿದ ವಿಲ್ಕ್ಸ್ 2007 ರಲ್ಲಿ ಇಸ್ಲಾಮಿನ ಪ್ರವಾದಿಯನ್ನು ನಾಯಿಯ ದೇಹದಿಂದ ಚಿತ್ರಿಸಿದ್ದಕ್ಕಾಗಿ ಪ್ರಾಣ ಬೆದರಿಕೆಗಳನ್ನು ಪಡೆದ ನಂತರ ಪೊಲೀಸ್ ರಕ್ಷಣೆಯಲ್ಲಿ ವಾಸಿಸುತ್ತಿದ್ದ. ಅಪಘಾತದಲ್ಲಿ ಆತನೊಂದಿಗೆ ಪ್ರಯಾಣಿಸುತ್ತಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳು ಕೂಡ ಸಾವನ್ನಪ್ಪಿದ್ದಾರೆ. ಅಪಘಾತದ ಬಗ್ಗೆ ಸ್ವೀಡಿಷ್ ಪೊಲೀಸರು ವರದಿ ಮಾಡಿದ್ದು, ಆದರೆ, ಯಾವುದೇ ಹೆಸರನ್ನು ಬಿಡುಗಡೆಮಾಡಿಲ್ಲ.
ಮೇಲ್ನೋಟಕ್ಕೆ ಇದೊಂದು ಇತರೆ ಅಪಘಾತಗಳಂತೆ ಇದೂ ಕೂಡಾ ಒಂದು ಅಪಘಾತದ ಎಂದು ಪ್ರಕರಣ ದಾಖಲಿಸಿದ್ದು, ಆ ಕುರಿತು ತನಿಖೆ ನಡೆಯಲಿದೆ. ಟ್ರಕ್ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿವಾದಾತ್ಮಕ ವ್ಯಂಗ್ಯ ಚಿತ್ರದ ಬಳಿಕ ವಿಕೃತ ಕಲಾವಿದ ಮಿಲ್ಕ್ಸ್ ನ ಮನೆಯನ್ನು ಸುಡುವ ಪ್ರಯತ್ನ 2010ರಲ್ಲಿ ನಡೆದಿತ್ತು. ಆ ಬಳಿಕ 2020ರಲ್ಲಿ ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ಮಹಿಳೆಯೊಬ್ಬರು ವಿಲ್ಕ್ಸ್ ನನ್ನು ಕೊಲ್ಲುವ ಸಂಚಿನ ಭಾಗವಾಗಿ ಬಂಧಿಸಲಾಗಿತ್ತು.