Home ಟಾಪ್ ಸುದ್ದಿಗಳು ಮುಸ್ಲಿಂ ಮಹಿಳೆಯನ್ನು ಅಪಹರಿಸಿ ಸಾರ್ವಜನಿಕವಾಗಿ ರೇಪ್ ಮಾಡ್ತೀನಿ ಎಂದ ಸ್ವಾಮೀಜಿ: ವೀಡಿಯೋ ವೈರಲ್

ಮುಸ್ಲಿಂ ಮಹಿಳೆಯನ್ನು ಅಪಹರಿಸಿ ಸಾರ್ವಜನಿಕವಾಗಿ ರೇಪ್ ಮಾಡ್ತೀನಿ ಎಂದ ಸ್ವಾಮೀಜಿ: ವೀಡಿಯೋ ವೈರಲ್

ಲಕ್ನೋ: ಉತ್ತರ ಪ್ರದೇಶದ ಸೀತಾಪುರದಲ್ಲಿ ‘ಜೈ ಶ್ರೀ ರಾಮ್’ ಎಂದು ಘೋಷಣೆಗಳನ್ನು ಕೂಗುತ್ತಾ ಜನಸಾಗರದ ನಡುವೆಯೇ ಕೇಸರಿ ಬಟ್ಟೆ ತೊಟ್ಟಿರುವ ಸ್ವಾಮಿಯೊಬ್ಬಸಾರ್ವಜನಿಕವಾಗಿ ಮುಸ್ಲಿಂ ಮಹಿಳೆಯರನ್ನು ಅಪಹರಿಸಿ ಅತ್ಯಾಚಾರ ಮಾಡುವಂತೆ ಕರೆ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

https://twitter.com/zoo_bear/status/1512036559960248323?ref_src=twsrc%5Etfw%7Ctwcamp%5Etweetembed%7Ctwterm%5E1512036559960248323%7Ctwgr%5E%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Fnews%3Fmode%3Dpwaaction%3Dclick

“ಯಾವುದೇ ಮುಸ್ಲಿಂ ಪುರುಷ ಹಿಂದೂ ಮಹಿಳೆಯರನ್ನು ಹಿಂಬಾಲಿಸಿದರೆ, ನಾನು ಸಾರ್ವಜನಿಕವಾಗಿ ಮುಸ್ಲಿಂ ಮಹಿಳೆಯರನ್ನು ಅಪಹರಿಸಿ ಬಹಿರಂಗವಾಗಿ ಅತ್ಯಾಚಾರ ಮಾಡುತ್ತೇನೆ” ಎಂದು ಸ್ವಾಮಿ ಹೇಳಿದರು.

ಈ ವಿಡಿಯೋವನ್ನು ಪತ್ರಕರ್ತರೊಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಉತ್ತರ ಪ್ರದೇಶ ಪೊಲೀಸರ ಅಧಿಕೃತ ಹ್ಯಾಂಡಲ್‌ಗೆ ಟ್ಯಾಗ್ ಮಾಡಲಾಗಿದೆ. 41 ಸೆಕೆಂಡುಗಳ ಕ್ಲಿಪ್‌ನಲ್ಲಿ, ಪೊಲೀಸ್ ಸಮವಸ್ತ್ರದಲ್ಲಿರುವ ವ್ಯಕ್ತಿಯನ್ನು ಸಹ ಕಾಣಬಹುದು.ಆದರೆ ಈತನ ವಿರುದ್ಧ ಇದುವರೆಗೂ ಕೂಡ ಯಾವುದೇ ಕ್ರಮ ಕೈಗೊಂಡ್ಡಿಲ್ಲ ಎಂದು ತಿಳಿದು ಬಂದಿದೆ.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp
Exit mobile version