Home ಜಾಲತಾಣದಿಂದ ʼಶಕ್ತಿʼ ಯೋಜನೆ ಉದ್ಘಾಟನೆ ವೇಳೆ ಸರ್ಕಾರಿ ಬಸ್ ಚಲಾಯಿಸಿ ಸ್ವಾಮೀಜಿ ಎಡವಟ್ಟು!

ʼಶಕ್ತಿʼ ಯೋಜನೆ ಉದ್ಘಾಟನೆ ವೇಳೆ ಸರ್ಕಾರಿ ಬಸ್ ಚಲಾಯಿಸಿ ಸ್ವಾಮೀಜಿ ಎಡವಟ್ಟು!

ವಿಜಯಪುರ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡುವಾಗ ಸ್ವಾಮೀಜಿಯೊಬ್ಬರು ಎಡವಟ್ಟು ಮಾಡಿಕೊಂಡ ಘಟನೆ ನಡೆದಿದೆ. 

ಭಾನುವಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡಿ ತಾವೇ ಸರ್ಕಾರಿ ಬಸ್ ಚಲಾಯಿಸಿದ್ದಾರೆ.

ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಘಟನೆ ನಡೆದಿದ್ದು, ಸುಮಾರು 5 ಕಿ.ಮೀ ವರೆಗೆ ಸರ್ಕಾರಿ ಬಸ್‌ನ್ನು ಸ್ವಾಮೀಜಿ ಚಲಾಯಿಸಿದ್ದಾರೆ. ಕೊಲ್ಹಾರದ ದಿಗಂಬರೇಶ್ವರ ಮಠದ ಕಲ್ಲಿನಾಥ್ ಸ್ವಾಮೀಜಿ ಸರ್ಕಾರಿ ಬಸ್ ಚಲಾಯಿಸುವ ಮೂಲಕ ಅಚಾತುರ್ಯ ಎಸಗಿದ್ದಾರೆ.

ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲೇ ಬಸ್ ತೆಗೆದುಕೊಂಡು ಹೋಗಿ ಕೊಲ್ಹಾರ ಪಟ್ಟಣದಲ್ಲಿ ಸ್ವಾಮೀಜಿ ಸುತ್ತಾಡಿಸಿದ್ದಾರೆ.

ನಿಯಮದಂತೆ ಸರ್ಕಾರಿ ಚಾಲಕ ಬಿಟ್ಟು ಬೇರೆಯವರು ಸರ್ಕಾರಿ ಬಸ್ ಚಲಾಯಿಸುವಂತಿಲ್ಲ. ಬಸ್ ಚಲಾಯಿಸುವವರು ಕಡ್ಡಾಯವಾಗಿ ಹೇವಿ ಲೈಸನ್ಸ್ ಪಡೆದಿರಬೇಕು. ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಸರ್ಕಾರಿ ಬಸ್‌ನ್ನು ಕಲ್ಲಿನಾಥ ಸ್ವಾಮೀಜಿ ಚಲಾಯಿಸಿದ್ದಾರೆ. ಸ್ವಾಮೀಜಿಯ ಅಚಾತುರ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version