ಪ್ರವಚನ ನೀಡುತ್ತಿರುವಾಗಲೇ ಹೃದಯಾಘಾತದಿಂದ ಸ್ವಾಮೀಜಿ ಸಾವು: ವೀಡಿಯೋ ವೈರಲ್

Prasthutha|

ಬೆಳಗಾವಿ:  ಸ್ವಾಮೀಜಿಯೊಬ್ಬರು ತಮ್ಮ ಜನ್ಮದಿನದಂದು ಪ್ರವಚನ ನೀಡುತ್ತಿರುವಾಗಲೇ ತೀವ್ರ ಹೃದಯಾಘಾತದಿಂದ  ಮೃತಪಟ್ಟಿರುವ ಘಟನೆ ನವೆಂಬರ್ 6 ರಂದು  ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಬಳೋಬಾಳ್ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

- Advertisement -

ಬಳೋಬಾಳ್ ಮಠದ ಸಂಗನಬಸವ (53) ಮೃತಪಟ್ಟ ಸ್ವಾಮೀಜಿ  ಎಂದು ಗುರುತಿಸಲಾಗಿದೆ.

ಪ್ರವಚನ ನೀಡುತ್ತಾ ಪ್ರಾಣ ಬಿಟ್ಟ ಸ್ವಾಮೀಜಿ : ಭಕ್ತರ ಮೊಬೈಲಿನಲ್ಲಿ ಕೊನೆಯ ಕ್ಷಣದ ದೃಶ್ಯಗಳು ಸೆರೆ

ನವೆಂಬರ್ 6 ರಂದು  ಸ್ವಾಮೀಜಿಯ ಜನ್ಮದಿನದ ನಿಮಿತ್ತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕುರ್ಚಿ ಮೇಲೆ ಕುಳಿತು ಆಶೀರ್ವಚನ ನೀಡುತ್ತಿದ್ದ ವೇಳೆ ಸಂಗನಬಸವ ಅವರು ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದಾರೆ.

- Advertisement -

ಬಿದ್ದ ಕ್ಷಣವೇ ಸ್ವಾಮೀಜಿ ಕೊನೆಯುಸಿರೆಳೆದಿದ್ದಾರೆ. ಸ್ವಾಮೀಜಿ ಬೀಳುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

Join Whatsapp
Exit mobile version