Home ಟಾಪ್ ಸುದ್ದಿಗಳು ಲುಲು ಮಾಲ್ ಶುದ್ಧೀಕರಿಸಲು ಬಂದ ಸ್ವಾಮೀಜಿಯ ಬಂಧನ

ಲುಲು ಮಾಲ್ ಶುದ್ಧೀಕರಿಸಲು ಬಂದ ಸ್ವಾಮೀಜಿಯ ಬಂಧನ

ಲಕ್ನೋ : ಲಕ್ನೋದಲ್ಲಿ ಹೊಸದಾಗಿ ತೆರೆಯಲ್ಪಟ್ಟ ಲುಲು ಮಾಲ್ ಅನ್ನು ಶುದ್ಧೀಕರಿಸುವ ನೆಪದಲ್ಲಿ ಅಯೋಧ್ಯೆಯಿಂದ ಬಂದಿದ್ದ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ.

ಲುಲು ಮಾಲ್ ಅನ್ನು ವಿವಾದದ ಕೇಂದ್ರವಾಗಿ ಪರಿವರ್ತಿಸುವ ಸಂಘ ಪರಿವಾರದ ಹುನ್ನಾರಗಳೆಲ್ಲವೂ ನೆಲ ಕಚ್ಚಿವೆ. ಅಯೋಧ್ಯೆಯ ಪ್ರಸಿದ್ಧ ಪುರೋಹಿತ  ಜಗದ್ಗುರಿ ಪರಮಹಂಸರನ್ನು ಮಾಲ್ ಮುಂದೆಯೇ ತಡೆದು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಪರಮಹಂಸ ನೇತೃತ್ವದ ಪರಿವಾರವೊಂದು ‘ನಮಾಜ್ ಮಾಡಿದ ಸ್ಥಳವು ಅಶುದ್ಧವಾಗಿದೆ. ಆದ್ದರಿಂದ  ಆ ಸ್ಥಳವನ್ನು ಶುದ್ಧೀಕರಣ ಕಲಶ ಮಾಡಬೇಕು ಎಂದು ಹೇಳಿ ಮಾಲ್ ಪ್ರವೇಶಿಸಲು ಪ್ರಯತ್ನಿಸಿತು. ಆದರೆ, ಪೊಲೀಸರು ಅವರನ್ನು  ತಡೆದು ವಶಕ್ಕೆ ತೆಗೆದುಕೊಂಡರು.

ಲುಲುಮಾಲ್ ಹೆಸರನ್ನು ಭಗವ ಭವನ್ಎಂದು ಬದಲಾಯಿಸಬೇಕೆಂದು ತಲೆ ಬುಡವಿಲ್ಲದ ವಿಚಿತ್ರವಾದ ಬೇಡಿಕೆಯನ್ನೂ ಮುಂದಿಟ್ಟಿರುವ ಪರಮಹಂಸ ಆಗಾಗ್ಗೆ ಇಂತಹ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಿರುವುದು ಸಹಜವಾಗಿದೆ.

ಈ ಹಿಂದೆ, ಆಗ್ರಾದ ತಾಜ್ ಮಹಲ್ ನಲ್ಲಿ ಜಲಾಭಿಷೇಕ ಮಾಡಲು ಹೋಗಿದ್ದಾಗ ಅಲ್ಲಿಯೂ ಪೊಲೀಸರು ಪರಮಹಂಸನನ್ನು ತಡೆದಿದ್ದರು.

Join Whatsapp
Exit mobile version