ಕಾರ್ಯಕಾರಿಣಿ ಸಮಿತಿಯಿಂದ ಸುಬ್ರಹ್ಮಣಿಯನ್ ಸ್ವಾಮಿಗೆ ಗೇಟ್ ಪಾಸ್ | ಟ್ವಿಟರ್ ಬಯೋದಿಂದ ‘BJP’ ಡಿಲೀಟ್

Prasthutha|

ಕೇಂದ್ರ ಸರಕಾರದ ಜನವಿರೋಧಿ ಕಾಯ್ದೆ ಹಾಗೂ ಆರ್ಥಿಕ ನೀತಿಯನ್ನು ವಿರೋಧಿಸಿ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದ ಸಂಸದ ಸುಬ್ರಹ್ಮಣಿಯನ್ ಸ್ವಾಮಿಯನ್ನು ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯಿಂದ ಕೈ ಬಿಡಲಾಗಿತ್ತು. ಇದರ ಬೆನ್ನಲ್ಲೇ ಬಿಜೆಪಿ ಸರಕಾರದ ವಿರುದ್ಧ ಸೆಡ್ಡು ಹೊಡೆದಿರುವ ಸ್ವಾಮಿ ತನ್ನ ಟ್ವಿಟರ್ ಖಾತೆಯಲ್ಲಿದ್ದ ‘BJP’ ಪಕ್ಷದ ಹೆಸರನ್ನೇ ತೆಗೆದುಹಾಕಿದ್ದಾರೆ.

- Advertisement -

ತನ್ನ ಟ್ವಿಟರ್ ಖಾತೆಯಲ್ಲಿನ ಬಯೋದಲ್ಲಿ ಇದ್ದ “ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ (BJP National Exec. Member)” ಉಲ್ಲೇಖವನ್ನು ಸ್ವಾಮಿ ಇದೀಗ ಅಳಿಸಿಹಾಕಿದ್ದಾರೆ. ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯಿಂದ ಗೇಟ್ ಪಾಸ್ ಆಗುತ್ತಿದ್ದತೆಂಯೇ ಬಯೋ ಬದಲಾವಣೆಗೊಳಿಸಿದ್ದಾರೆ.

ಹಳೆಯ ಬಯೋ

- Advertisement -
ಅಳಿಸಿಹಾಕಿರುವ ಬಯೋ

ರಾಜ್ಯಸಭಾ ಸದಸ್ಯರಾಗಿರುವ ಸುಬ್ರಹ್ಮಣಿಯನ್ ಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಸರಕಾರದ ಆರ್ಥಿಕ ನೀತಿಯನ್ನು ಕಟುವಾಗಿ ಟೀಕಿಸುತ್ತಲೇ ಇದ್ದರು. ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಧ್ವನಿಯೆತ್ತಿದ ಬಿಜೆಪಿ ಸಂಸದ ವರುಣ್ ಗಾಂಧಿಯನ್ನೂ ಸಮಿತಿಯಿಂದ ಕೈಬಿಡಲಾಗಿತ್ತು.

Join Whatsapp