Home ಟಾಪ್ ಸುದ್ದಿಗಳು ಅಂಬಾನಿ ಮನೆ ವಿಳಾಸ ಕೇಳಿದ ಶಂಕಿತ ಅರೆಸ್ಟ್ : ಬಯಲಾಯ್ತು ಅಡ್ರೆಸ್ ಕೇಳಿದ ರಹಸ್ಯ

ಅಂಬಾನಿ ಮನೆ ವಿಳಾಸ ಕೇಳಿದ ಶಂಕಿತ ಅರೆಸ್ಟ್ : ಬಯಲಾಯ್ತು ಅಡ್ರೆಸ್ ಕೇಳಿದ ರಹಸ್ಯ

ಮುಂಬೈ : ಭಾರತದ ನಂ.1 ಶ್ರೀಮಂತ ಮುಖೇಶ್‌ ಅಂಬಾನಿ ಅವರ ಮನೆ ವಿಳಾಸವನ್ನು ಇಬ್ಬರು ಅನಾಮಿಕ ವ್ಯಕ್ತಿಗಳು ಕೇಳಿದರು ಎಂಬ ಸುದ್ದಿ ಭಾರೀ ಸದ್ದು ಮಾಡಿದ್ದು, ಆ್ಯಂಟೀಲಿಯಾ ನಿವಾಸದ ಬಳಿ ಮತ್ತೆ ಹೈಅಲರ್ಟ್‌ ಘೋಷಿಸಿ, ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಇನ್ನು ಇದರ ಬೆನ್ನಲ್ಲೇ ವಿಳಾಸ ಕೇಳಿದ ಇಬ್ಬರು ಶಂಕಿತರ ಪೈಕಿ ಒಬ್ಬನನ್ನು ಪೊಲೀಸರು ಬಂಧಿಸಿ ಯುವಕನ ವಿಚಾರಣೆ ನಡೆಸಿದಾಗ ಅವರು ಆಂಟಿಲಿಯಾವನ್ನು ನೋಡಲು ಮಾತ್ರ ಬಯಸಿದ್ದರು ಎಂದು ಹೇಳಿದ್ದಾರೆ.


ಸೋಮವಾರ, ಮುಂಬೈನ ಟ್ಯಾಕ್ಸಿ ಚಾಲಕನೊಬ್ಬ ಇಬ್ಬರು ಯುವಕರು ಆಂಟಿಲಿಯಾ ವಿಳಾಸವನ್ನು ಕೇಳುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ನೀಡಿದ್ದ. ಅನುಮಾನಾಸ್ಪದವಾಗಿ ಕಾಣುತ್ತಿದ್ದ ಅವರ ಬಳಿ ಕಪ್ಪು ಚೀಲವೊಂದಿದ್ದು, ಇದಾದ ನಂತರ ಪೊಲೀಸರು ಕಾರ್ಯಾಚರಣೆಗಿಳಿದಿದ್ದು, ಮನೆಯ ಸುತ್ತ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಮಾಹಿತಿ ನೀಡಿದ ಚಾಲಕನನ್ನು ಕೂಡಲೇ ಠಾಣೆಗೆ ಕರೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದ್ದು ಆ ಬಳಿಕ ಪ್ರಕರಣದ ತನಿಖೆ ಆರಂಭ ಮಾಡಲಾಗಿದೆ.

ಟ್ಯಾಕ್ಸಿ ಚಾಲಕ ನೀಡಿದ ಮಾಹಿತಿ ಆಧರಿಸಿ ನಿರ್ದಿಷ್ಟಬಣ್ಣವೊಂದರ ಕಾರಿನ ಬೆನ್ನು ಹತ್ತಿದ್ದಾರೆ. ಜೊತೆಗೆ ಮುಕೇಶ್‌ ಅಂಬಾನಿ ಮನೆಯ ಸುತ್ತಲಿನ ಸಿಸಿ ಟೀವಿ ದೃಶ್ಯಗಳನ್ನು ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ. ಹಾಗೂ ಒಬ್ಬ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Join Whatsapp
Exit mobile version