Home ಟಾಪ್ ಸುದ್ದಿಗಳು ಮಾಜಿ ಸಂಸದೆ ಸುಷ್ಮೀತಾ ದೇವ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ

ಮಾಜಿ ಸಂಸದೆ ಸುಷ್ಮೀತಾ ದೇವ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ

ನವದೆಹಲಿ: ಕಾಂಗ್ರೆಸ್ ನ ಮಾಜಿ ಸಂಸದೆ ಸುಷ್ಮೀತಾ ದೇವ್ ಪಕ್ಷಕ್ಕೆ ರಾಜೀನಾಮೆ ನೀಡಿ, ಇಂದು ಪ.ಬ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ತೃಣಮೂಲ ಕಾಂಗ್ರೆಸ್ ಗೆ ಸೇರಲಿದ್ದಾರೆ.


ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಸಲ್ಲಿಸಿದ್ದಾರೆಂದು ವರದಿಯಾಗಿದೆ.
ಅವರು ಮೂರು ದಶಕಗಳ ಕಾಲ ಕಾಂಗ್ರೆಸ್ ನಲ್ಲಿ ಇದ್ದು, ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದರು.

ಸುಷ್ಮೀತಾ ದೇವ್ ಅವರ ತಂದೆ ಸಂತೋಷ್ ಮೋಹನ್ ದೇವ್ ಈ ಹಿಂದೆ ಕೇಂದ್ರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು . ಮತ್ತು ತಾಯಿ ಬಿತಿಕಾ ದೇವ್ ಅವರು ಅಸ್ಸಾಂನಲ್ಲಿ ಶಾಸಕಿಯಾಗಿದ್ದರು.

Join Whatsapp
Exit mobile version