Home ಟಾಪ್ ಸುದ್ದಿಗಳು ಮಂತ್ರಿ ಗ್ರೂಪ್ ಚೇರ್ಮೇನ್ ಗೆ ಜಾರಿ ನಿರ್ದೇಶನಾಲಯ ನೋಟೀಸ್ : ದಕ್ಷಿಣ ಭಾರತದ ಅತಿದೊಡ್ಡ ರಿಯಾಲ್ಟರ್...

ಮಂತ್ರಿ ಗ್ರೂಪ್ ಚೇರ್ಮೇನ್ ಗೆ ಜಾರಿ ನಿರ್ದೇಶನಾಲಯ ನೋಟೀಸ್ : ದಕ್ಷಿಣ ಭಾರತದ ಅತಿದೊಡ್ಡ ರಿಯಾಲ್ಟರ್ ಗೆ ಇಡಿ ಅಟ್ಯಾಕ್

ಬೆಂಗಳೂರು: ಜಾರಿ ನಿರ್ದೇಶನಾಲಯ (ಇಡಿ), ಮಂತ್ರಿ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುಶೀಲ್ ಪಾಂಡುರಂಗ ಮಂತ್ರಿ ಅವರಿಗೆ ತನಿಖೆಗೆ ಹಾಜರಾಗುವಂತೆ ನೋಟೀಸು ಹೊರಡಿಸಿದೆ.

ದಕ್ಷಿಣ ಭಾರತದ ಅತಿದೊಡ್ಡ ರಿಯಾಲ್ಟರ್ ಆಗಿರುವ ಮಂತ್ರಿ ಡೆವಲಪರ್ಸ್ ಸಿಎಂಡಿ ಸುಶೀಲ್ ಪಾಂಡುರಂಗ ಮಂತ್ರಿ ಅವರು ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ವಿಚಾರಣೆ ಎದುರಿಸಲಿದ್ದಾರೆ.

ಜಾರಿ ನಿರ್ದೇಶನಾಲಯದ ತನಿಖಾಧಿಕಾರಿ , ಮಂತ್ರಿಗೆ ಹೊರಡಿಸಿರುವ ನೋಟೀಸಿನಲ್ಲಿ ಸದರಿ ತನಿಖೆಗೆ ಸಂಬಂಧಿಸಿದಂತೆ ಮಂತ್ರಿ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ನ ಸ್ಥಾಪಕ ಮತ್ತು ಪ್ರರ‍್ತಕ ನರ‍್ದೇಶಕ ಸುಶೀಲ್ ಪಾಂಡುರಂಗ ಮಂತ್ರಿ ಅವರ ಹಾಜರಾತಿ ಅಗತ್ಯವೆಂದು ನಾನು ಪರಿಗಣಿಸುತ್ತೇನೆ. ಆದ್ದರಿಂದ, ಮನಿ ಲಾಂಡರಿಂಗ್ ಕಾಯ್ದೆಯ ಸೆಕ್ಷನ್ 50 ರ ಉಪ ಸೆಕ್ಷನ್ 2 ಮತ್ತು ಉಪ ಸೆಕ್ಷನ್ 3 ರ ಅಡಿಯಲ್ಲಿ ನನಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಲು, ಸುಶೀಲ್ ಪಾಂಡುರಂಗ ಮಂತ್ರಿ ಅವರು ಜೂನ್ 26, 2022 ರಂದು ನನ್ನ ಕಚೇರಿಯಲ್ಲಿ ನನ್ನ ಮುಂದೆ ಹಾಜರಾಗಬೇಕು ಎಂದು ನಾನು ಬಯಸುತ್ತೇನೆ ಎಂದು ತನಿಖಾಧಿಕಾರಿ ಮಂತ್ರಿ ಗ್ರೂಪ್ ಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.

Join Whatsapp
Exit mobile version