Home ಟಾಪ್ ಸುದ್ದಿಗಳು ₹2 ಸಾವಿರ ಮುಖಬೆಲೆಯ ನೋಟನ್ನು ರದ್ದುಗೊಳಿಸಬೇಕು: ಸುಶೀಲ್ ಕುಮಾರ್ ಮೋದಿ ಒತ್ತಾಯ

₹2 ಸಾವಿರ ಮುಖಬೆಲೆಯ ನೋಟನ್ನು ರದ್ದುಗೊಳಿಸಬೇಕು: ಸುಶೀಲ್ ಕುಮಾರ್ ಮೋದಿ ಒತ್ತಾಯ

ನವದೆಹಲಿ: ₹2 ಸಾವಿರ ಮುಖಬೆಲೆಯ ನೋಟುಗಳನ್ನು ಹಂತ ಹಂತವಾಗಿ ರದ್ದುಗೊಳಿಸಬೇಕು ಹಾಗೂ ಅವುಗಳನ್ನು ಹಿಂದಿರುಗಿಸಲು ನಾಗರಿಕರಿಗೆ ಎರಡು ವರ್ಷ ಕಾಲಾವಕಾಶ ನೀಡಬೇಕು ಎಂದು ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ ಒತ್ತಾಯಿಸಿದ್ದಾರೆ.

ಸೋಮವಾರ ರಾಜ್ಯಸಭೆಯ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, ದೇಶದ ಬಹುತೇಕ ಎಟಿಎಂಗಳಲ್ಲಿ ₹2 ಸಾವಿರ ಮುಖಬೆಲೆಯ ನೋಟುಗಳು ಲಭ್ಯವಿಲ್ಲ. ಮುಂದಿನ ದಿನಗಳಲ್ಲಿ ಈ ನೋಟುಗಳನ್ನು ಅಮಾನ್ಯೀಕರಿಸಲಾಗುತ್ತದೆ ಎಂಬ ಗಾಳಿ ಸುದ್ದಿ ಕೂಡ ಹಬ್ಬಿದೆ. ಈ ಕುರಿತು ಸರ್ಕಾರವು ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದರು.

ಭಾರತೀಯ ರಿಸರ್ವ್ ಬ್ಯಾಂಕ್, ಮೂರು ವರ್ಷಗಳ ಹಿಂದೆಯೇ ₹2 ಸಾವಿರ ಮುಖಬೆಲೆಯ ನೋಟುಗಳ ಮುದ್ರಣ ಸ್ಥಗಿತಗೊಳಿಸಿದೆ. ₹1 ಸಾವಿರ ಮುಖಬೆಲೆಯ ನೋಟುಗಳ ಚಲಾವಣೆ ಸ್ಥಗಿತವಾಗಿದ್ದ ಸಂದರ್ಭದಲ್ಲೇ ₹2 ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿದ್ದರ ಹಿಂದಿನ ಉದ್ದೇಶವೇ ಅರ್ಥವಾಗುತ್ತಿಲ್ಲ. ₹2 ಸಾವಿರ ಮುಖಬೆಲೆಯ ನೋಟುಗಳನ್ನು ಸಂಗ್ರಹಿಸಿಡಲಾಗುತ್ತಿದೆ. ಡ್ರಗ್ಸ್ ಸೇರಿದಂತೆ ಇತರ ಅಕ್ರಮ ವ್ಯವಹಾರಗಳಿಗೆ ಇದನ್ನು ಬಳಸಲಾಗುತ್ತಿದೆ. ಹಣ ಅಕ್ರಮ ವರ್ಗಾವಣೆಯಲ್ಲೂ ಇದರ ಬಳಕೆ ಹೆಚ್ಚಿದೆ ಎಂದು ಸುಶೀಲ್ ಕುಮಾರ್ ಆರೋಪಿಸಿದ್ದಾರೆ.

Join Whatsapp
Exit mobile version