ಮಂಬೈ: ಸುಶಾಂತ್ ಸಿಂಗ್ ರಜಪೂತ್ ಅವರ ಫೇಸ್ಬುಕ್ ಖಾತೆ ಇದ್ದಕ್ಕಿದ್ದಂತೆ ಆ್ಯಕ್ಟೀವ್ ಆಗಿದ್ದು, ಅಭಿಮಾನಿಗಳಿಗೆ ಒಮ್ಮೆಲೇ ಗಾಬರಿ ಆಗುವಂತಹ ಘಟನೆ ನಡೆದಿದೆ.
2022ರ ಹೊಸ ವರ್ಷದ ಪ್ರಯುಕ್ತ ಸುಶಾಂತ್ ಸಿಂಗ್ ರಜಪೂತ್ ಅವರ ಅಧಿಕೃತ ಫೇಸ್ ಬುಕ್ ಖಾತೆಯಿಂದ ಎಲ್ಲರಿಗೂ ಶುಭಾಶಯ ಕೋರಲಾಗಿದೆ. ಒಮ್ಮೆಲೇ ಆ ಪೋಸ್ಟ್ ನೋಡಿದ ಅಭಿಮಾನಿಗಳು ಶಾಕ್ ಆಗಿದ್ದು, ನಿಧನರಾಗಿರುವ ಸುಶಾಂತ್ ಸಿಂಗ್ ರಜಪೂತ್ ಅವರ ಫೇಸ್ ಬುಕ್ ಖಾತೆ ಹೇಗೆ ಆ್ಯಕ್ಟೀವ್ ಆಯಿತು ಎಂದು ಅಚ್ಚರಿಗೆ ಕಾರಣವಾಯಿತು.
ಬಳಿಕ ಫೇಸ್ಬುಕ್ ಖಾತೆಯ ಅಸಲಿ ವಿಷಯ ಗೊತ್ತಾಗಿದ್ದು, ಸುಶಾಂತ್ ಸಿಂಗ್ ರಜಪೂತ್ ಪರವಾಗಿ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಅವರು ಈ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನೋಡಿ ಒಮ್ಮೆಲೇ ಎದೆಬಡಿತ ನಿಂತಂಗಾಯಿತು ಎಂದು ಹಲವು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.