ಸುರತ್ಕಲ್ ಟೋಲ್ ಗೇಟ್ 3 ದಿನಗಳಲ್ಲಿ ತೆರವು: ಜಿಲ್ಲಾಧಿಕಾರಿ ಭರವಸೆ !

ಮಂಗಳೂರು: ಅಕ್ರಮವಾಗಿ ನಿರ್ಮಿಸಲಾಗಿರುವ ಟೋಲ್ ಗೇಟ್ ಅನ್ನು ತೆರವುಗೊಳಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಧರಣಿಯ ಬೆನ್ನಲ್ಲೇ, 3 ದಿನಗಳಲ್ಲಿ ಈ ಟೋಲನ್ನು ಶಾಶ್ವತವಾಗಿ ಮುಚ್ಚುವುದಾಗಿ ಹೋರಾಟಗಾರರಿಗೆ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಅಕ್ರಮ ಟೋಲ್ ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಧರಣಿ ಸುಮಾರು ಒಂದು ತಿಂಗಳು ಸಮೀಪಿಸುತ್ತಿದ್ದು, ಟೋಲ್ ಗೇಟ್ ತೆರವುಗೊಳಿಸಲು ನೀಡಿದ ಗಡುವು 10 ದಿನಗಳನ್ನೇ ಮೀರಿದೆ. ಆದರೂ ಟೋಲ್ ಸಂಗ್ರಹ ಮಾತ್ರ ಎಗ್ಗಿಲ್ಲದೇ ಮುಂದುವರಿದಿದೆ. ಈ ಕುರಿತು ಜಾತ್ಯಾತೀತ ನಿಲುವಿನ ಸರ್ವಪಕ್ಷಗಳು ಮತ್ತು ಸಮಾನ ಮನಸ್ಕ ಸಂಘಟನೆಗಳ ಜಂಟಿ ನಿಯೋಗ ದ.ಕ ಜಿಲ್ಲಾಧಿಕಾರಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತ್ತು.

- Advertisement -

ಈ ಹಿನ್ನೆಲ್ಲೆಯಲ್ಲಿ ಮುಂದಿನ 4 ನಾಲ್ಕು ದಿನಗಳಲ್ಲಿ ತೆರವು ಪ್ರಕ್ರಿಯೆಯನ್ನು ಪೂರ್ತಿಗೊಳಿಸುವುದಾಗಿ ಹೋರಾಟಗಾರರಿಗೆ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಈ ನಿಯೋಗದಲ್ಲಿ ವೇದಿಕೆಯ ಅಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ, ಸಿಪಿಐಎಂ ಜಿಲ್ಲಾ ಮುಖಂಡರಾದ ಯಾದವ್ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್, ಕಾಂಗ್ರೆಸ್ ಮುಖಂಡೆ ಶಾಲೆಟ್ ಪಿಂಟೊ, ರಾಜ್ಯ ರೈತ ಸಂಘದ ಓಸ್ವಾಲ್ಡ್ ಫೆರ್ನಾಂಡೀಸ್, ಸನ್ನಿ ಡಿಸೋಜ, ವಸಂತ ಪೂಜಾರಿ, ಎಂ. ದೇವದಾಸ್ ಉಪಸ್ಥಿತರಿದ್ದರು.