ಸುರತ್ಕಲ್: ಚರಂಡಿ ಕಾಮಗಾರಿ ನಡೆಯುವ ವೇಳೆ ಪಕ್ಕದ ತಡೆ ಗೋಡೆ ಕುಸಿದು ಓರ್ವ ಮೃತಪಟ್ಟು, ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೃಷ್ಣಾಪುರದ ಕೆಇಬಿ ಬಳಿ ಬುಧವಾರ ನಡೆದಿದೆ.
ಮೃತರು ಬಜಪೆ ಕರಂಬಾರು ನಿವಾಸಿ ಹನೀಫ್ ಎಂದು ತಿಳಿದು ಬಂದಿದ್ದು ಮಣಿ ಎಂಬವರು ಗಾಯಗೊಂಡಿದ್ದಾರೆ.
ರಸ್ತೆ ಬದಿಯಲ್ಲಿ ಚರಂಡಿ ಮಾಡುತ್ತಿದ್ದ ವೇಳೆ ಕಾಂಪೌಂಡ್ ಕುಸಿದು ಓರ್ವ ಕೂಲಿ ಕಾರ್ಮಿಕ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.