ಸುರತ್ಕಲ್: ಶಿಕ್ಷಕಿಯ ಕರಿಮಣಿ ಸರ ಎಗರಿಸಿ ಪರಾರಿಯಾದ BCA ಪದವೀಧರ ಬಂಧನ

Prasthutha|

ಸುರತ್ಕಲ್: ಶಿಕ್ಷಕಿಯಿಂದ ಸುಮಾರು 2 ಪವನ್ ಚಿನ್ನದ ಕರಿಮಣಿ ಸರ ಎಗರಿಸಿ ಪರಾರಿಯಾದ ಯುವಕನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಿಸಿಎ ಪದವೀಧರ ಚಿಕ್ಕಮಗಳೂರು ಮೂಲದ ಕೆ.ಎಸ್.ಶ್ರೀಸ್ (24) ಎಂದು ಗುರುತಿಸಲಾಗಿದೆ.

- Advertisement -

ಬುಧವಾರ ಮಧ್ಯಾಹ್ನ 1.30ರ ಸುಮಾರಿಗೆ ಸುರತ್ಕಲ್ ನ ಶಾಲೆಯೊಂದರ ಶಿಕ್ಷಕಿಯೊಬ್ಬರು ಮನೆಯಿಂದ ಶಾಲೆಗೆ ಬರುತ್ತಿದ್ದಾಗ ವಿದ್ಯಾದಾಯಿನಿ ಬಳಿಯ ಅಂಡರ್ ಪಾಸ್ ಬಳಿ ಯುವಕನೊಬ್ಬ ಕರಿಮಣಿ ಸರ ಎಗರಿಸಿ ಪರಾರಿಯಾಗಿದ್ದ. ಸುರತ್ಕಲ್ ಠಾಣೆಯ ಇನ್ಸ್ಪೆಕ್ಟರ್ ಚಂದ್ರಪ್ಪ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

Join Whatsapp
Exit mobile version