ಸುರತ್ಕಲ್ | ಶೋರೂಂನಿಂದ 2 ಕಾರು ಕಳವು: ಪ್ರಕರಣ ದಾಖಲು

Prasthutha|

ಮಂಗಳೂರು: ಹೊಸಬೆಟ್ಟು ಜಂಕ್ಷನ್ ಬಳಿಯಿರುವ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆಗೆ ನುಗ್ಗಿದ ಕಳ್ಳರು ಎರಡು ಕಾರುಗಳನ್ನು ಕಳವುಗೈದು ಪರಾರಿಯಾಗಿರುವ ಘಟನೆ ಬುಧವಾರ ತಡರಾತ್ರಿ ನಡೆದಿದ್ದು, ಕಳವಾದ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -


ಈ ಮಳಿಗೆ ಸೂರಲ್ಪಾಡಿ ನಿವಾಸಿ ಅಬಿದ್ ಅಹಮ್ಮದ್ ಎಂಬವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ.


ವಾಹನಗಳ ಶೋರೂಂನಲ್ಲಿ ನಿಲ್ಲಿಸಿದ್ದ ಮಾರುತಿ ಸ್ವಿಫ್ಟ್ ಹಾಗೂ ಹ್ಯುಂಡೈ ಕ್ರೇಟಾ ಕಾರುಗಳನ್ನು ಕಚೇರಿಯ ಡ್ರಾಯರ್ನಲ್ಲಿದ್ದ ಕಾರುಗಳ ಕೀಗಳನ್ನು ಬಳಸಿ ಕದ್ದೊಯ್ದಿದ್ದಾರೆ. ಕಚೇರಿಯಲ್ಲಿದ್ದ ₹ 4 ಸಾವಿರ ನಗದು, ಎಚ್ಪಿ ಪ್ರಿಂಟರ್, ಲ್ಯಾಪ್ಟಾಪ್ ಹಾಗೂ ಮೊಬೈಲ್ಗಳೂ ಕಳವಾಗಿವೆ. ಕಳವಾದ ಸ್ವಿಫ್ಟ್ ಕಾರಿಗೆ ₹ 6 ಲಕ್ಷ, ಕ್ರೇಟಾ ಕಾರಿಗೆ ₹ 9 ಲಕ್ಷ, ಪ್ರಿಂಟರ್ಗೆ ₹ 10 ಸಾವಿರ ದರ ಇದೆ ಎಂಬುದಾಗಿ ಮಳಿಗೆಯ ಮಾಲೀಕರಾದ ಆಬಿಬ್ ಅಹಮದ್ ಸೂರಲ್ಪಾಡಿಯವರು ದೂರಿನಲ್ಲಿ ಉಲ್ದೇಖಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.