Home ಕರಾವಳಿ ಸುರತ್ಕಲ್ | ರಿಕ್ಷಾ ಚಾಲಕನಿಗೆ ಹಲ್ಲೆ ಪ್ರಕರಣ: ಮೂವರ ಬಂಧನ

ಸುರತ್ಕಲ್ | ರಿಕ್ಷಾ ಚಾಲಕನಿಗೆ ಹಲ್ಲೆ ಪ್ರಕರಣ: ಮೂವರ ಬಂಧನ

ಸುರತ್ಕಲ್: ಚಿತ್ರಾಪುರ ಸಮೀಪ ರಿಕ್ಷಾ ಚಾಲಕನಿಗೆ ತಲವಾರಿನಿಂದ ಹಲ್ಲೆ ನಡೆಸಿ, ರಿಕ್ಷಾ ಗಾಜು ಪುಡಿಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಮೂವರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.


ಅಮಲ್ ರಾಜ್, ಪ್ರತೀಕ್, ನಿಶಾಂತ್ ಬಂಧಿತ ಆರೋಪಿಗಳಾಗಿದ್ದು, ಇತರ ಮೂವರು ಆರೋಪಿಗಳಿಗೆ ಶೋಧ ಕಾರ್ಯ ಮುಂದುವರಿದಿದೆ.


ಕಡಲ ಕಿನಾರೆಯ ಬಳಿ ಕಡಲ್ಕೊರೆತ ಆಗದಂತೆ ಹಾಕಿದ್ದ ಕಲ್ಲುಗಳ ಮಧ್ಯ ಭಾಗದಲ್ಲಿ ಕೆಲವು ಯುವಕರು ಗಾಂಜಾ ಸೇವನೆ, ಮಾರಾಟ ಹಾಗೂ ಅನೈತಿಕ ಚಟುವಟಿಕೆ ನಡೆಸುತ್ತಿದ್ದು, ಇದರ ವಿರುದ್ಧ ಪಣಂಬೂರು ಮೊಗವೀರ ಮಹಾಸಭಾದ ಪ್ರಮುಖರು ಹಾಗೂ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದರು.


ಇದರಿಂದ ಕೋಪಗೊಂಡ ಯುವಕರು ಗಾಂಜಾದ ಅಮಲಿನಲ್ಲಿ ಆದಿತ್ಯವಾರ ಸಂಜೆ ಚಿತ್ರಾಪುರ ಕಡಲ ಕಿನಾರೆಯ ಬಳಿ ಸಾರ್ವಜನಿಕರೆದುರೇ ತಲವಾರು ಝಳಪಿಸುತ್ತಾ ರಿಕ್ಷಾ ಚಾಲಕ ಸುನಿಲ್ ಎಂಬವರ ಮೇಲೆ ಹಾಗೂ ಕೆಲವು ಜನರ ಮೇಲೂ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಗಾಯಗೊಂಡ ರಿಕ್ಷಾಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Join Whatsapp
Exit mobile version