Home ಟಾಪ್ ಸುದ್ದಿಗಳು ಸುರತ್ಕಲ್; ಎಚ್ ಪಿಸಿಎಲ್ ಗ್ಯಾಸ್ ಫಿಲ್ಲಿಂಗ್ ನೌಕರರ ಸಮಸ್ಯೆಗಳಿಗೆ ರಾಜ್ಯ ಸರಕಾರ ಮಧ್ಯಪ್ರವೇಶಿಸಿ ಬಗೆಹರಿಸಲಿ: SDTU

ಸುರತ್ಕಲ್; ಎಚ್ ಪಿಸಿಎಲ್ ಗ್ಯಾಸ್ ಫಿಲ್ಲಿಂಗ್ ನೌಕರರ ಸಮಸ್ಯೆಗಳಿಗೆ ರಾಜ್ಯ ಸರಕಾರ ಮಧ್ಯಪ್ರವೇಶಿಸಿ ಬಗೆಹರಿಸಲಿ: SDTU

ಮಂಗಳೂರು: ಕಳೆದ 25 ವರ್ಷಗಳಿಂದ ಹಿಂದೂಸ್ತಾನ್ ಪೆಟ್ರೋ ಕೆಮಿಕಲ್ ಲಿಮಿಟೆಡ್ ಕಂಪನಿಯಿಂದ ಗ್ಯಾಸ್ ಫಿಲ್ಲಿಂಗ್ ಕ್ಲೀನರ್ ಗಳಾಗಿ ಸುಮಾರು 600 ರಷ್ಟು ನೌಕರರು ಕೆಲಸ ನಿರ್ವಹಿಸುತ್ತಿದ್ದು, ಲಾರಿ ಮಾಲಕರ ಎಸೋಸಿಯೇಷನ್ ನವರು ನಮಗೆ ಕ್ಲೀನರ್ ಬೇಡ ಎಂದು ಎಚ್ ಪಿಸಿಎಲ್ ಗ್ಯಾಸ್ ಫಿಲ್ಲಿಂಗ್ ಕಂಪನಿಗೆ ಮನವಿ ಮಾಡಿದ್ದಾರೆ. ಇದರಿಂದ ವಾರಕ್ಕೆ ಎರಡು ದಿವಸ ಮಾತ್ರ ಕೆಲಸ ನಿರ್ವಹಿಸಿ ಕುಟುಂಬವನ್ನು ಸಲಹುವ ನೌಕರರಿಗೆ ಸಂಕಷ್ಟ ಎದುರಾಗಿದೆ. ಈ ಬಗ್ಗೆ ರಾಜ್ಯ ಸರಕಾರ ಮಧ್ಯಪ್ರವೇಶಿಸಿ ಇಲ್ಲಿನ ನೌಕರಿಗಾಗುವ ತೊಂದರೆಯನ್ನು ನಿವಾರಿಸಲು ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (SDTU) ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸಿದ್ದೀಕ್ ಕಣ್ಣಂಗಾರ್ ಸರಕಾರವನ್ನು ಆಗ್ರಹಿಸಿದ್ದಾರೆ

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, ಹಿಂದಿನಿಂದಲೂ ಈ ಭಾಗದಲ್ಲಿ ಹಲವಾರು ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿನ ನೆಲ ಜಲ ಎಲ್ಲವನ್ನು ಉಪಯೋಗಿಸಿ ಸ್ಥಳೀಯರಿಗೆ ಉದ್ಯೋಗ ಕೂಡಾ ನೀಡದೆ ಕೇವಲ ಹಾರು ಬೂದಿ, ವಿಷಕಾರಿಯಾದ ನೀರು, ರೋಗರುಜಿನಗಳನ್ನು ಮಾತ್ರ ಇಲ್ಲಿನ ನಿವಾಸಿಗಳಿಗೆ ಕಂಪನಿಗಳು ನೀಡಿದೆ ಈ ಬಗ್ಗೆ ಹಲವಾರು ವರ್ಷಗಳಿಂದ ಇಲ್ಲಿನ ನಿವಾಸಿಗಳ ಬೇಡಿಕೆಗೆ ಪೂರಕವಾಗಿ ತೊಂದರೆಗೊಳಗಾದ ನಾಗರಿಕರಿಗೆ ಕಂಪನಿಗಳಿಂದ ಸ್ಪಷ್ಟವಾದ ಪರಿಹಾರ ದೊರಕಿಸಿಕೊಡಲು ಯಾವುದೇ ಸರಕಾರಕ್ಕೆ ಸಾಧ್ಯವಾಗಿಲ್ಲ. ಗ್ಯಾಸ್ ಟ್ಯಾಂಕರ್ ಫಿಲ್ಲಿಂಗ್ ಗೆ ಕ್ಲಿನರ್ ಬೇಕೆಂಬುವುದು ಎಚ್ ಪಿಸಿಎಲ್ ಕಂಪನಿಯ ಕಡ್ಡಾಯ ನಿಯಮವಾಗಿದೆ. ಆದರೆ ಲಾರಿ ಮಾಲಕರ ಎಸೋಸಿಯೇಷನ್ ರವರ ಮನವಿಗೆ ಗ್ಯಾಸ್ ಫಿಲ್ಲಿಂಗ್ ನೌಕರರ ಉದ್ಯೋಗವನ್ನು ಕಂಪನಿ ಕಡಿತಗೋಳಿಸಿದೆ. ಇದರಿಂದ ಇಲ್ಲಿನ 600 ಕ್ಕೂ ಹೆಚ್ಚು ನೌಕರರಿಗೆ ಉದ್ಯೋಗ ನಷ್ಟವಾಗುವ ಸಾಧ್ಯತೆ ಇದೆ. ಈ ಕ್ರಮವನ್ನು ಖಂಡಿಸಿ ಈಗಾಗಲೇ ನೌಕರರು ಗ್ಯಾಸ್ ವಾಹನವನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.

ಈಗಾಗಲೆ ನೌಕರರು ಜಿಲ್ಲಾಧಿಕಾರಿ, ಶಾಸಕರು, ಸಂಸದರ ಗಮನಕ್ಕೆ ಇಲ್ಲಿನ ಸಮಸ್ಯೆಗಳನ್ನು ಗಮನಕ್ಕೆ ತರಲಾಗಿದ್ದು, ಶಾಸಕರು ತಕ್ಷಣ ಕಂಪನಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಆದರೆ ಯಾವುದೇ ಪ್ರಯೋಜನ ವಾಗಲಿಲ್ಲ. ಆದ್ದರಿಂದ ಸರಕಾರ ಈ ಕೂಡಲೇ ಮದ್ಯ ಪ್ರವೇಶಿಸಿ ಇಲ್ಲಿನ ನೌಕರರ ಸಮಸ್ಯೆಯನ್ನು ಬಗೆಹರಿಸ ಬೇಕೆಂದು SDTU ಆಗ್ರಹಿಸುತ್ತಿದೆ.

Join Whatsapp
Exit mobile version