Home ಕರಾವಳಿ ಸುರತ್ಕಲ್ | ಜೆಸಿಬಿ ಬಳಸಿ ಎಟಿಎಂ ಹಣ ಕಳವು ಯತ್ನ: ನಾಲ್ವರ ಬಂಧನ

ಸುರತ್ಕಲ್ | ಜೆಸಿಬಿ ಬಳಸಿ ಎಟಿಎಂ ಹಣ ಕಳವು ಯತ್ನ: ನಾಲ್ವರ ಬಂಧನ

ಸುರತ್ಕಲ್: ಜೆಸಿಬಿ ಬಳಸಿ ಸುರತ್ಕಲ್ ನ ಬಳಿ ಎಟಿಎಂಗೆ ಕನ್ನ ಹಾಕಲು ಯತ್ನಿಸಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.


ಬಂಧಿತರನ್ನು ಶಿವಮೊಗ್ಗ ಮೂಲದ ದೇವರಾಜ್ (24), ಭರತ್ ಹೆಚ್ (20), ನಾಗರಾಜ ನಾಯ್ಕ್ (21) ಮತ್ತು ಧನರಾಜ್ ನಾಯ್ಕ್ (22) ಎಂದು ಗುರುತಿಸಲಾಗಿದೆ. ಈ ಪೈಕಿ ಆರೋಪಿ ಧನರಾಜ್ ನಾಯ್ಕ್ ಕೃತ್ಯ ನಡೆಸಿದ್ದ ಆರೋಪಿಗಳಿಗೆ ಆರ್ಥಿಕ ಸಹಾಯ ಮಾಡಿದ್ದ.


ಆರೋಪಿಗಳಿಂದ 50 ಸಾವಿರ ಮೌಲ್ಯದ ದ್ವಿಚಕ್ರ ವಾಹನ ಹಾಗೂ ಎರಡು ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅವರ ವಿರುದ್ಧ ಐಪಿಸಿ ಸೆಕ್ಷನ್ 457, 380, 511 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ದೇವರಾಜ್ ನಾಯ್ಕ್ ಹಾಗೂ ನಾಗರಾಜ ನಾಯ್ಕ ವಿರುದ್ಧ ಶಿಕಾರಿಪುರ ಪಟ್ಟಣ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳಿವೆ.

Join Whatsapp
Exit mobile version