Home ಟಾಪ್ ಸುದ್ದಿಗಳು ಎನ್’ಸಿಪಿ ಕಾರ್ಯಾಧ್ಯಕ್ಷರಾಗಿ ಸುಪ್ರಿಯಾ ಸುಳೆ, ಪ್ರಫುಲ್ ಪಟೇಲ್ ನೇಮಕ

ಎನ್’ಸಿಪಿ ಕಾರ್ಯಾಧ್ಯಕ್ಷರಾಗಿ ಸುಪ್ರಿಯಾ ಸುಳೆ, ಪ್ರಫುಲ್ ಪಟೇಲ್ ನೇಮಕ

ನವದೆಹಲಿ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರಾಗಿ ಸುಪ್ರಿಯಾ ಸುಳೆ ಮತ್ತು ಪ್ರಫುಲ್ ಪಟೇಲ್ ಅವರನ್ನು ನೇಮಿಸಿ ಎನ್ ಸಿ ಪಿ ಹಿರಿಯ ಮುಖಂಡ ಶರದ್ ಪವಾರ್ ಆದೇಶ ಹೊರಡಿಸಿದ್ದಾರೆ.

ಪಕ್ಷದ 25ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶರದ್ ಪವಾರ್ ಈ ಘೋಷಣೆ ಮಾಡಿದ್ದಾರೆ. ಎನ್ಸಿಪಿಯ ಮತ್ತೊಬ್ಬ ನಾಯಕ ಅಜಿತ್ ಪವಾರ್ ಸಮ್ಮುಖದಲ್ಲಿ ಈ ಘೋಷಣೆ ಮಾಡಿರುವುದು ವಿಶೇಷ.


ಸುಪ್ರಿಯಾ ಸುಳೆ 2006ರಿಂದ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ನಂತರದ ದಿನಗಳಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಮೂಲಕ ಜನರೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ. ಮಹಾರಾಷ್ಟ್ರದಲ್ಲಿ ಪಾದಯಾತ್ರೆ, ಸಮಾವೇಷಗಳನ್ನು ನಡೆಸುವ ಜನರಿಗೆ ಹತ್ತಿರವಾಗಿದ್ದು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಪ್ರಫುಲ್ ಪಟೇಲ್ ಕೂಡ ಹಲವು ಸಲ ಶಾಸಕರಾಗಿ ಪಕ್ಷದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಆದರೆ ಅಜಿತ್ ಪವಾರ್ಗೆ ಸದ್ಯ ಪಕ್ಷದ ಯಾವುದೇ ಉನ್ನತ ಸ್ಥಾನ ಘೋಷಣೆ ಮಾಡಿಲ್ಲ. ಅಜಿತ್ ಪವಾರ್ ಕಳೆದ ತಿಂಗಳು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು, ಅದರ ನಂತರ ಪಕ್ಷದ ಸದಸ್ಯರು ಮತ್ತು ಇತರ ರಾಜಕೀಯ ಮುಖಂಡರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಪವಾರ್ ಅವರ ಪ್ರಸ್ತಾಪವನ್ನು ಚರ್ಚಿಸಲು ರಚಿಸಲಾದ ಎನ್‌ಸಿಪಿ ಸಮಿತಿಯು ಮೇ 5 ರಂದು ಅವರ ರಾಜೀನಾಮೆಯನ್ನು ತಿರಸ್ಕರಿಸಿತು ಮತ್ತು ಪಕ್ಷದ ಅಧ್ಯಕ್ಷರಾಗಿ ಮುಂದುವರಿಯುವಂತೆ ಒತ್ತಾಯಿಸಿತು.

Join Whatsapp
Exit mobile version