Home ಟಾಪ್ ಸುದ್ದಿಗಳು ನೋಟು ನಿಷೇಧವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್

ನೋಟು ನಿಷೇಧವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: 2016 ರ ನವೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೋಟು ನಿಷೇಧ ಮಾಡಿದ್ದು, ಇದನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದೆ.


ಅಲ್ಲದೆ ಕೇಂದ್ರ ಸರಕಾರವು ಅದನ್ನು ನಿಷೇಧಿಸಿದೆ ಎಂಬ ಕಾರಣಕ್ಕೆ ನಿರ್ಧಾರವನ್ನು ತಪ್ಪೆಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದೆ.

ಆರ್‌’ಬಿಐ ಒಪ್ಪಿಗೆ ಪಡೆದೇ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ತಜ್ಞರ ಸಲಹೆ ಪಡೆದು ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬಹುದಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ನ್ಯಾಯಮೂರ್ತಿ ಎಸ್.ಎ.ನಜೀರ್ ನೇತ್ವತದ ಐವರು ನ್ಯಾಯಮೂರ್ತಿಗಳಿರುವ ಸಾಂವಿಧಾನಿಕ ಪೀಠ ಈ ತೀರ್ಪು ಪ್ರಕಟಿಸಿದೆ. ನಝೀರ್ ಅವರು ಜನವರಿ 4ರಂದು ನಿವೃತ್ತರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಇದು ಅವರ ಮಹತ್ವದ ಕೊನೆಯ ತೀರ್ಪು ಎನ್ನಲಾಗಿದೆ.

ನೋಟು ಅಮಾನ್ಯೀಕರಣದ 2016ರ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಜಾಗೊಳಿಸಿದ ಸಾಂವಿಧಾನಿಕ ಪೀಠ, ಆರ್ಥಿಕ ಕ್ರಮಗಳ ವಿಚಾರದಲ್ಲಿ ಮಧ್ಯಪ್ರವೇಶಿಸುವಾಗ ಗಣನೀಯ ನಿಯಂತ್ರಣವಿರಬೇಕು. ಅಂತಹ ಕ್ರಮಗಳ ಹಿಂದಿನ ನಿರ್ಧಾರವನ್ನು ನಾವು ನ್ಯಾಯಿಕ ದೃಷ್ಟಿಯಿಂದ ನೋಡಲಾಗದು ಎಂದ ಹೇಳಿದೆ.

ಆದರೆ ನ್ಯಾಯಮೂರ್ತಿ ಬಿ.ನಾಗರತ್ನ ಅವರು ಭಿನ್ನ ತೀರ್ಪು ನೀಡಿದ್ದಾರೆ.

  ನನ್ನ ಅಭಿಪ್ರಾಯದಲ್ಲಿ ನವೆಂಬರ್ 8ರ ಅಧಿಸೂಚನೆ ಮೂಲಕ ನೋಟು ಅಮಾನ್ಯ ಮಾಡಿದ ಕ್ರಮವು ಕಾನೂನುಬಾಹಿರವಾಗಿದೆ. ಆದರೆ 2016 ರಲ್ಲಿದ್ದ ಸ್ಥಿತಿಯನ್ನು ಈಗ ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ನಾಗರತ್ನ ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.

Join Whatsapp
Exit mobile version