Home ಟಾಪ್ ಸುದ್ದಿಗಳು ಅಸ್ಸಾಂ ಪೌರತ್ವ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಎತ್ತಿಹಿಡಿದ ಸುಪ್ರೀಂಕೋರ್ಟ್

ಅಸ್ಸಾಂ ಪೌರತ್ವ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಎತ್ತಿಹಿಡಿದ ಸುಪ್ರೀಂಕೋರ್ಟ್

ಬೆಂಗಳೂರು: ಅಸ್ಸಾಂ ಒಪ್ಪಂದದ ಪ್ರಕಾರ ವಲಸಿಗರಿಗೆ ಪೌರತ್ವ ನೀಡುವ 1955ರ ಪೌರತ್ವ ಕಾಯ್ದೆಯ ಸೆಕ್ಷನ್ 6A ದ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.


ಈ ಸೆಕ್ಷನ್ ನಡಿ 1966 ಜನವರಿ 1 ಹಾಗೂ 1971 ಮಾರ್ಚ್ 25ರ ನಡುವೆ ಅಸ್ಸಾಂಗೆ ಪ್ರವೇಶಿಸಿದ ವಲಸಿಗರಿಗೆ ಭಾರತದ ಪೌರತ್ವ ನೋಂದಣಿ ಮಾಡಿಕೊಳ್ಳಬಹುದು ಎಂದು ಹೇಳುತ್ತದೆ.

ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸೂರ್ಯಕಾಂತ, ಎಂ.ಎಂ ಸುಂದರೇಶ್, ಜೆ.ಬಿ. ಪಾರ್ದೀವಾಲ ಹಾಗೂ ಮನೋಜ್ ಮಿಶ್ರಾ ಅವರಿದ್ದ ಸಾಂವಿಧಾನಿಕ ಪೀಠ 4:1ರ ಬಹುಮತದಲ್ಲಿ ಗುರುವಾರ ತೀರ್ಪು ಪ್ರಕಟಿಸಿತು.


ನ್ಯಾಯಮೂರ್ತಿ ಪಾರ್ದೀವಾಲ ಅವರು ಭಿನ್ನ ತೀರ್ಪು ನೀಡಿದರು. ಈ ಸೆಕ್ಷನ್ ಅಸಂವಿಧಾನಿಕ ಎಂದು ಅವರು ತೀರ್ಪಿನಲ್ಲಿ ಹೇಳಿದ್ದಾರೆ.


‘ಅಸ್ಸಾಂ ಒಪ್ಪಂದವು ಅನಧಿಕೃತ ವಲಸೆ ಸಮಸ್ಯೆಗೆ ರಾಜಕೀಯ ಪರಿಹಾರವಾಗಿತ್ತು. ಸೆಕ್ಷನ್ 6A ಶಾಸನಾತ್ಮಕ ಪರಿಹಾರವಾಗಿದೆ’ ಎಂದು ಸಿಜೆಐ ಚಂದ್ರಚೂಡ್ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.

Join Whatsapp
Exit mobile version