Home ಟಾಪ್ ಸುದ್ದಿಗಳು ಭಾರತೀಯ ಫುಟ್ಬಾಲ್ ಫೆಡರೇಷನ್ ನ ಅಮಾನತು ಕುರಿತು ಬುಧವಾರ ಸುಪ್ರೀಂ ಕೋರ್ಟ್’ನಲ್ಲಿ ವಿಚಾರಣೆ

ಭಾರತೀಯ ಫುಟ್ಬಾಲ್ ಫೆಡರೇಷನ್ ನ ಅಮಾನತು ಕುರಿತು ಬುಧವಾರ ಸುಪ್ರೀಂ ಕೋರ್ಟ್’ನಲ್ಲಿ ವಿಚಾರಣೆ

ನವದೆಹಲಿ: ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ಅನ್ನು ಅಮಾನತುಗೊಳಿಸಿದ ವಿಶ್ವ ಫುಟ್ಬಾಲ್ ಆಡಳಿತ ಮಂಡಳಿ ಫಿಫಾ ಕೌನ್ಸಿಲ್ ನ ನಿರ್ಧಾರದ ವಿರುದ್ಧ ಕೇಂದ್ರವು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಬುಧವಾರ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈ ವಿಷಯವನ್ನು ಸುಪ್ರೀಂ ಕೋರ್ಟ್ ಮುಂದೆ ಪ್ರಸ್ತಾಪಿಸಿ, ಈ ವಿಷಯವನ್ನು ಬುಧವಾರ ವಿಚಾರಣೆ ನಡೆಸುವಂತೆ ಕೇಳಿಕೊಂಡಿದ್ದರು.

ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಬುಧವಾರ ಈ ವಿಷಯದ ಬಗ್ಗೆ ವಿಚಾರಣೆ ನಡೆಸುವುದಾಗಿ ಹೇಳಿದೆ.

ವಿಶ್ವ ಫುಟ್ಬಾಲ್ ಆಡಳಿತ ಮಂಡಳಿ ಫಿಫಾ ಅನಗತ್ಯ ಹಸ್ತಕ್ಷೇಪದ ಕಾರಣ ಮುಂದಿಟ್ಟು ಎಐಎಫ್ ಎಫ್ ಅನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿತ್ತು. ಫಿಫಾದ ನಿರ್ಧಾರವು ಅಕ್ಟೋಬರ್ ನಲ್ಲಿ ನಿಗದಿಯಾಗಿದ್ದ 17 ವರ್ಷದೊಳಗಿನವರ ಮಹಿಳಾ ವಿಶ್ವಕಪ್ ಆತಿಥ್ಯ ವಹಿಸುವ ಹಕ್ಕನ್ನು ಕಸಿದುಕೊಂಡಿದೆ.

Join Whatsapp
Exit mobile version