Home ಟಾಪ್ ಸುದ್ದಿಗಳು ಸಂವಿಧಾನದ 97ನೇ ತಿದ್ದುಪಡಿ ರದ್ದು: ಗುಜರಾತ್ ಹೈಕೋರ್ಟ್ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ಸಂವಿಧಾನದ 97ನೇ ತಿದ್ದುಪಡಿ ರದ್ದು: ಗುಜರಾತ್ ಹೈಕೋರ್ಟ್ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ನವದೆಹಲಿ, ಜು.20: ಸಹಕಾರಿ ಸೊಸೈಟಿಗಳ ನಿರ್ವಹಣೆಗೆ ಸಂಬಂಧಿಸಿ 2011ರ ಡಿಸೆಂಬರ್ ನಲ್ಲಿ ತರಲಾದ ಸಂವಿಧಾನದ 97ನೇ ತಿದ್ದುಪಡಿಯನ್ನು ರದ್ದುಪಡಿಸಿದ್ದ ಗುಜರಾತ್ ಹೈಕೋರ್ಟ್ ನ ತೀರ್ಪನ್ನು ಸುಪ್ರೀಂಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ.
ಈ ಮೂಲಕ ಸಂವಿಧಾನದ 97ನೇ ತಿದ್ದುಪಡಿ ರದ್ದುಗೊಂಡಂತಾಗಿದೆ.


ನ್ಯಾಯಮೂರ್ತಿಗಳಾದ ಆರ್. ನಾರಿಮನ್, ಕೆ.ಎಂ.ಜೋಸೆಫ್ ಮತ್ತು ಬಿ.ಆರ್.ಗವಾಯಿ ಅವರನ್ನೊಳಗೊಂಡ ಮೂವರು ನ್ಯಾಯಾಧೀಶರ ಪೀಠವು, ಗುಜರಾತ್ ಹೈಕೋರ್ಟ್ ತೀರ್ಪಿನ ವಿರುದ್ಧ ಭಾರತ ಒಕ್ಕೂಟವು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿತು.


ಗುಜರಾತ್ ಹೈಕೋರ್ಟ್ 2013ರಲ್ಲಿ ಈ ತಿದ್ದುಪಡಿಯನ್ನು ರದ್ದುಪಡಿಸಿ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು.
ರಾಜ್ಯ ಪಟ್ಟಿಯಲ್ಲಿರುವ ಸಹಕಾರಿ ಕ್ಷೇತ್ರದ ಸೊಸೈಟಿಗಳಿಗೆ ಸಂಬಂಧಿಸಿದಂತೆ ಕಾನೂನು ರೂಪಿಸಲು ಸಂಸತ್ ಗೆ ಅವಕಾಶವಿಲ್ಲ ಎಂದು ಗುಜರಾತ್ ಹೈಕೋರ್ಟ್ ತೀರ್ಪಿನಲ್ಲಿ ತಿಳಿಸಿತ್ತು.
ಪೀಠದಲ್ಲಿದ್ದ ಕೆ.ಎಂ.ಜೋಸೆಫ್ ಭಿನ್ನ ತೀರ್ಪು ನೀಡಿದ್ದಾರೆ.

Join Whatsapp
Exit mobile version