Home ಟಾಪ್ ಸುದ್ದಿಗಳು ಜ್ಞಾನವಾಪಿ ಪ್ರಕರಣದ ವಿಚಾರಣೆಗೆ ಪ್ರತ್ಯೇಕ ಪೀಠ ರಚಿಸಿದ ಸುಪ್ರೀಂ ಕೋರ್ಟ್: ನಾಳೆಯಿಂದ ವಿಚಾರಣೆ

ಜ್ಞಾನವಾಪಿ ಪ್ರಕರಣದ ವಿಚಾರಣೆಗೆ ಪ್ರತ್ಯೇಕ ಪೀಠ ರಚಿಸಿದ ಸುಪ್ರೀಂ ಕೋರ್ಟ್: ನಾಳೆಯಿಂದ ವಿಚಾರಣೆ

ನವದೆಹಲಿ: ಜ್ಞಾನವಾಪಿ ಮಸೀದಿ ಮತ್ತು ಕಾಶಿ ವಿಶ್ವನಾಥ ದೇವಾಲಯ ಪ್ರಕರಣದ ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ಪ್ರತ್ಯೇಕ ವಿಭಾಗೀಯ ಪೀಠ ರಚಿಸಲಾಗುವುದು ಎಂದು ತಿಳಿಸಿದ ಸುಪ್ರೀಂ ಕೋರ್ಟ್, ಈ ಕುರಿತ ವಿಚಾರಣೆಯನ್ನು ಶುಕ್ರವಾರ 3 ಗಂಟೆಗೆ ಆರಂಭಿಸುವುದಾಗಿ ತಿಳಿಸಿದೆ.

ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ಅಂಗಶುದ್ಧಿ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹೇಳಲಾಗುತ್ತಿರುವ ಜಾಗದ ಸಂರಕ್ಷಣೆಗೆ ನೀಡಿದ ಆದೇಶವನ್ನು ವಿಸ್ತರಿಸುವಂತೆ ಕೋರಿ ಸಲ್ಲಿಸಲಾದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ಈ ಮೇಲಿನಂತೆ ತಿಳಿಸಿದೆ.

ಹಿಂದೂ ಭಕ್ತರ ಪರ ಹಿರಿಯ ವಕೀಲ ವಿಷ್ಣು ಶಂಕರ್ ಜೈನ್ ವಾದ ಮಂಡಿಸಿದರು. ಮಸೀದಿ ಆವರಣದ ರಕ್ಷಣೆಗೆ ನೀಡಲಾಗಿರುವ ತೀರ್ಪು ನವೆಂಬರ್ 12ರಂದು ಕೊನೆಗೊಳ್ಳಲಿದೆ ಎಂದು ಅವರು ಸುಪ್ರೀಂ ಕೋರ್ಟ್’ನ ಪೀಠದ ಗಮನಕ್ಕೆ ತಂದರು. ಈ ಮಾಹಿತಿಯನ್ನು ಸುಪ್ರೀಮ್ ಕೋರ್ಟ್’ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ಪೀಠ ಗಣನೆಗೆ ತೆಗೆದುಕೊಂಡಿದೆ.

ವಾರಣಾಸಿಯ ಜ್ಞಾನವಾಪಿ ಮಸೀದಿ ಆವರಣದೊಳಗಿನ ಪ್ರದೇಶವನ್ನು ರಕ್ಷಣೆ ಮಾಡುವಂತೆ ಮೇ 17ರಂದು ಸುಪ್ರೀಂ ಕೋರ್ಟ್ ಮಧ್ಯಂತರ ತೀರ್ಪು ನೀಡಿತ್ತು.

Join Whatsapp
Exit mobile version