Home ಟಾಪ್ ಸುದ್ದಿಗಳು ಮುಸ್ಲಿಮರಿಂದ ಹಿಂದೂಗಳ ಮತಾಂತರದ ಆರೋಪ : ಮಾಧ್ಯಮ ವರದಿ ಆಧರಿಸಿದ ಅರ್ಜಿ ನಿರಾಕರಿಸಿದ ಸುಪ್ರೀಂ ಕೋರ್ಟ್‌

ಮುಸ್ಲಿಮರಿಂದ ಹಿಂದೂಗಳ ಮತಾಂತರದ ಆರೋಪ : ಮಾಧ್ಯಮ ವರದಿ ಆಧರಿಸಿದ ಅರ್ಜಿ ನಿರಾಕರಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ : ಹರ್ಯಾಣದ ಮೇವತ್‌ ನಲ್ಲಿ ಮುಸ್ಲಿಮರು ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ ಎಂದು ಆಪಾದಿಸಿದ ಪಿಐಎಲ್‌ ಒಂದನ್ನು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ಸಿಜೆಐ ರಮಣ, ನ್ಯಾ. ಎ.ಎಸ್.‌ ಬೋಪಣ್ಣ, ನ್ಯಾ. ಹೃಷಿಕೇಶ್‌ ರಾಯ್‌ ನ್ಯಾಯಪೀಠ ಈ ಆದೇಶ ಜಾರಿಗೊಳಿಸಿದೆ. ಕೇವಲ ಸುದ್ದಿ ಪತ್ರಿಕೆಗಳ ವರದಿಗಳನ್ನು ಆಧರಿಸಿ ಕೋರ್ಟ್‌ ವಿಷಯ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಕೋರ್ಟ್‌ ತಿಳಿಸಿದೆ.

“ಕ್ಷಮಿಸಿ, ಸುದ್ದಿ ಪತ್ರಿಕೆಗಳ ವರದಿಗಳ ಆಧಾರದಲ್ಲಿ ನಾವು ಇದನ್ನು ಕೈಗೆತ್ತಿಕೊಳ್ಳಬಹುದು ಎಂಬುದು ನಮಗನಿಸುತ್ತಿಲ್ಲ” ಎಂದು ಸಿಜೆಐ ರಮಣ ಹೇಳಿದ್ದಾರೆ.

ಹಿಂದೂಗಳ ಜೀವನ ಮತ್ತು ಸ್ವಾತಂತ್ರ್ಯ ಸಂಕಷ್ಟಕ್ಕೆ ಸಿಲುಕಿದ್ದು, ಸ್ಥಳೀಯ ಪೊಲೀಸರು ಅಧಿಕಾರವನ್ನು ಚಲಾಯಿಸುವಲ್ಲಿ ವಿಫಲರಾಗಿದ್ದಾರೆ ಎಂದು ಈ ಸಂಬಂಧ ಅರ್ಜಿ ಸಲ್ಲಿಸಿರುವ ನ್ಯಾಯವಾದಿ ವಿಷ್ಣು ಶಂಕರ್‌ ಜೈನ್‌ ಆಪಾದಿಸಿದ್ದರು. ಹಿಂದೂಗಳ ಮತಾಂತರ ಕುರಿತ ಆರೋಪಗಳನ್ನು ತನಿಖೆಗೊಳಪಡಿಸುವಂತೆ ಅವರು ಅರ್ಜಿಯಲ್ಲಿ ವಿನಂತಿಸಿದ್ದರು.

Join Whatsapp
Exit mobile version