Home ಟಾಪ್ ಸುದ್ದಿಗಳು ನವದೆಹಲಿ: ವಕ್ಫ್ ಕಾನೂನನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಲು ಸುಪ್ರೀಮ್ ಕೋರ್ಟ್ ನಕಾರ

ನವದೆಹಲಿ: ವಕ್ಫ್ ಕಾನೂನನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಲು ಸುಪ್ರೀಮ್ ಕೋರ್ಟ್ ನಕಾರ

ನವದೆಹಲಿ: ವಕ್ಫ್ ಕಾಯ್ದೆಯು ಹಿಂದೂಗಳು ಮತ್ತು ಇತರ ಮುಸ್ಲಿಮರೇತರ ಸಮುದಾಯಗಳ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಕರೆದು ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಲು ಸುಪ್ರೀಮ್ ಕೋರ್ಟ್ ನಿರಾಕರಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸುಪ್ರೀಮ್ ಕೋರ್ಟ್, ಶಾಸನಕ್ಕೆ ಸವಾಲೆಸೆಯುದನ್ನು ಅಥವಾ ಸಂಸತ್ತಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಬಿಜೆಪಿ ನಾಯಕ, ಹಿರಿಯ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಅರ್ಜಿ ಸಲ್ಲಿಸಿದ್ದರು.

ನಿರ್ದಿಷ್ಟ ಪ್ರಕರಣದ ಸತ್ಯಗಳನ್ನು ನಮಗೆ ತೋರಿಸಿ, ನೀವು ಕಾನೂನಿನಡಿಯಲ್ಲಿ ಮೊಕದ್ದಮೆ ಹೂಡಿದ್ದರೆ ಶಾಸನಕ್ಕೆ ಎಸೆಯುವ ಸವಾಲುಗಳನ್ನು ಪರಿಗಣಿಸುವುದಿಲ್ಲ ಎಂದು ನ್ಯಾಯಮೂರ್ತಿ ಚಂದ್ರಚೂಡ್ ತಿಳಿಸಿದ್ದಾರೆ.

ನಿಮ್ಮ ಆಸ್ತಿಯನ್ನು ತೆಗೆದುಕೊಳ್ಳಲಾಗಿದೆಯೇ ಅಥವಾ ನಿಮ್ಮನ್ನು ಹೊರಹಾಕಲಾಗಿದೆಯೇ ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಈ ಸಂದರ್ಭದಲ್ಲಿ ಅರ್ಜಿದಾರರನ್ನು ಪ್ರಶ್ನಿಸಿದ್ದಾರೆ.

Join Whatsapp
Exit mobile version