Home ಟಾಪ್ ಸುದ್ದಿಗಳು 12 ಹೈಕೋರ್ಟ್ ಗಳಿಗೆ 68 ಹೆಸರುಗಳನ್ನು ಶಿಫಾರಸು ಮಾಡಿ ದಾಖಲೆ ಸೃಷ್ಟಿಸಿದ ಸುಪ್ರೀಮ್ ಕೋರ್ಟ್

12 ಹೈಕೋರ್ಟ್ ಗಳಿಗೆ 68 ಹೆಸರುಗಳನ್ನು ಶಿಫಾರಸು ಮಾಡಿ ದಾಖಲೆ ಸೃಷ್ಟಿಸಿದ ಸುಪ್ರೀಮ್ ಕೋರ್ಟ್

ನವದೆಹಲಿ: ಮಹತ್ವಪೂರ್ಣ ತೀರ್ಪು ಪ್ರಕಟಿಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ಮೂರು ಸದಸ್ಯರ ಸುಪ್ರೀಮ್ ಕೋರ್ಟ್ ಕೊಲಿಜಿಯಮ್ 68 ಹೆಸರುಗಳನ್ನು ಹೈಕೋರ್ಟ್ ನ್ಯಾಯಾಧೀಶ ಹುದ್ದೆಗೆ ಶಿಫಾರಸು ಮಾಡಿದೆ.. ಇದು ಸಾಕಷ್ಟು ಬಿಕ್ಕಟ್ಟನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಶಿಫಾರಸುಗಳನ್ನು ಮಾಡಲಾಗಿರುವ 12 ಹೈಕೋರ್ಟ್‌ ಗಳಲ್ಲಿ ಪ್ರಮುಖವಾಗಿ ಅಲಹಾಬಾದ್, ರಾಜಸ್ತಾನ, ಕಲ್ಕತ್ತಾ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ, ಮದ್ರಾಸ್, ಮಧ್ಯ ಪ್ರದೇಶ, ಕರ್ನಾಟಕ, ಪಂಜಾಬ್, ಹರ್ಯಾಣ, ಕೇರಳ, ಛತ್ತೀಸ್ ಗಡ ಮತ್ತು ಅಸ್ಸಾಮ್ ಗಳು ಒಳಗೊಂಡಿದೆ ಎಂದು ಹೇಳಲಾಗಿದೆ.

ಆಗಸ್ಟ್ 25 ಮತ್ತು ಸೆಪ್ಟೆಂಬರ್ 1 ರಂದು ನಡೆದ ಸಭೆಯಲ್ಲಿ ಕೊಲಿಜಿಯಮ್ 112 ಅಭ್ಯರ್ಥಿಗಳ ಹೆಸರನ್ನು ಪರಿಗಣಿಸಿದೆ. ಅವುಗಳಲ್ಲಿ ಬಾರ್ ಕೌನ್ಸಿಲ್ ನಿಂದ 82 ಮತ್ತು ನ್ಯಾಯಾಂಗ ಸೇವೆಯಿಂದ 31 ಮಂದಿಯನ್ನು ಅಯ್ಕೆ ಮಾಡಿತ್ತು.

ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳಾ ನ್ಯಾಯಾಂಗ ಅಧಿಕಾರಿ – ಮಾರ್ಲಿ ವಂಕುಂಗ್ ಅವರನ್ನು ಗೌಹಾಟಿ ಹೈಕೋರ್ಟ್ ಗೆ ಕೊಲಿಜಿಯಮ್ ಶಿಫಾರಸು ಮಾಡಿದೆ. ಅವರು ಮಿಝೋರಾಂ ಮೂಲದಿಂದ ಮೊದಲ ಹೈಕೋರ್ಟ್ ನ್ಯಾಯಮೂರ್ತಿಯಾಗಲಿದ್ದಾರೆ. ಕೊಲಿಜಿಯಮ್ ನ ಈ ಆಯ್ಕೆಯೊಂದಿಗೆ ಒಟ್ಟು 10 ಮಂದಿ ಮಹಿಳೆಯರನ್ನು ಮೇಲ್ದರ್ಜೆಗೆ ಶಿಫಾರಸು ಮಾಡಿದಂತಾಗಿದೆ.

Join Whatsapp
Exit mobile version