Home ಟಾಪ್ ಸುದ್ದಿಗಳು ಪತಿಯಿಂದಲೇ ಸುಪ್ರೀಂಕೋರ್ಟ್ ವಕೀಲೆಯ ಬರ್ಬರ ಹತ್ಯೆ: ಆರೋಪಿಯ ಬಂಧನ

ಪತಿಯಿಂದಲೇ ಸುಪ್ರೀಂಕೋರ್ಟ್ ವಕೀಲೆಯ ಬರ್ಬರ ಹತ್ಯೆ: ಆರೋಪಿಯ ಬಂಧನ

ನವದೆಹಲಿ: ಸುಪ್ರೀಂಕೋರ್ಟ್ ವಕೀಲೆಯನ್ನು ಹತ್ಯೆ ಮಾಡಿದ ಆರೋಪದಲ್ಲಿ ಮಾಜಿ ಭಾರತೀಯ ಕಂದಾಯ ಸೇವೆ ಅಧಿಕಾರಿ ಅಜಯ್ ನಾಥ್ ಎಂಬವರನ್ನು ಸೋಮವಾರ ದೆಹಲಿ ಪೊಲೀಸರು ಬಂಧಿಸಿದ್ದಾರೆ.


ಮೃತ ಮಹಿಳೆಯನ್ನು ಆರೋಪಿಯ ಪತ್ನಿ ರೇಣು ಸಿನ್ಹಾ (61) ಎಂದು ಗುರುತಿಸಲಾಗಿದೆ.

ಆರೋಪಿ ಅಜಯ್ ನಾಥ್ ಭಾನುವಾರ ಅಪರಾಧ ಎಸಗಿದ ನಂತರ ಬಂಗಲೆಯ ಸ್ಟೋರ್ ರೂಂನಲ್ಲಿ ಅಡಗಿಕುಳಿತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ರೇಣು ಸಿನ್ಹಾ ತನ್ನ ಸಹೋದರನ ಪುನರಾವರ್ತಿತ ಫೋನ್ ಕರೆಗಳಿಗೆ ಎರಡು ದಿನಗಳಿಂದ ಪ್ರತಿಕ್ರಿಯಿಸಲು ವಿಫಲವಾದಾಗ ಘಟನೆ ಬೆಳಕಿಗೆ ಬಂದಿದೆ. ಇದರಿಂದ ಆತಂಕಗೊಂಡ ಆಕೆಯ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ.


ಬಂಗಲೆಯೊಳಗೆ ಬಲವಂತವಾಗಿ ಪ್ರವೇಶಿಸಿದ ನಂತರ, ಬಾತ್ ರೂಂನಲ್ಲಿ ರೇಣು ಶವವನ್ನು ಪೊಲೀಸರು ಪತ್ತೆ ಮಾಡಿದರು. ಏತನ್ಮಧ್ಯೆ, ಘಟನೆಯ ನಂತರ ಆಕೆಯ ಪತಿ ನಾಪತ್ತೆಯಾಗಿದ್ದು, ಅವರ ಫೋನ್ ಆಫ್ ಆಗಿತ್ತು. ದಂಪತಿಗಳು ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ಸಹೋದರ ಬಹಿರಂಗಪಡಿಸಿದ್ದಾನೆ.

Join Whatsapp
Exit mobile version