ರಾಹುಲ್ ಗಾಂಧಿಯನ್ನು ಲೋಕಸಭೆಯಿಂದ ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ದೂರು ನೀಡಿದ ಸುಪ್ರೀಂ ಕೋರ್ಟ್ ವಕೀಲ

Prasthutha|

ದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸದನದಿಂದ ಅನರ್ಹಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್ ವಕೀಲ ವಿನೀತ್ ಜಿಂದಾಲ್ ಅವರು ಗುರುವಾರ ಲೋಕಸಭೆ ಸ್ಪೀಕರ್‌ಗೆ ದೂರು ನೀಡಿದ್ದಾರೆ.

ಗುಜರಾತ್‌‌ನ ಸೂರತ್‌ ನ್ಯಾಯಾಲಯವು ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಿದ ನಂತರ ವಿನೀತ್ ಜಿಂದಾಲ್ ಲೋಕಸಭಾಧ್ಯಕ್ಷರಿಗೆ ದೂರು ನೀಡಿದ್ದಾರೆ.

- Advertisement -

ಸೂರತ್ ಕೋರ್ಟಿನ ಮುಖ್ಯ ಮ್ಯಾಜಿಸ್ಟ್ರೇಟ್ ಎಚ್. ಎಚ್. ವರ್ಮಾ ಅವರು ಭಾರತೀಯ ದಂಡ ಸಂಹಿತೆ 499 ಮತ್ತು 500ರಡಿ ರಾಹುಲ್ ತಪ್ಪಿತಸ್ಥ ಎಂದು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಬೆನ್ನಿಗೇ ಜಾಮೀನು ನೀಡಿ, ಮೇಲಿನ ಕೋರ್ಟಿಗೆ ಅಪೀಲು ಹೋಗಲವಕಾಶವಾಗುವಂತೆ ಶಿಕ್ಷೆಯನ್ನು 30 ದಿನ ಮುಂದೂಡಿದೆ.

2019ರಲ್ಲಿ ಕರ್ನಾಟಕದಲ್ಲಿ ಮಾತನಾಡುತ್ತ ರಾಹುಲ್ ಗಾಂಧಿಯವರು ಎಲ್ಲ ಕಳ್ಳರ ಸರ್ ನೇಮ್ ಗಳು ಮೋದಿ ಎಂದಿರುವುದೇಕೆ ಎಂದಿದ್ದರು. ಅದರ ವಿರುದ್ಧದ ಮೊಕದ್ದಮೆಯಲ್ಲಿ ಶಿಕ್ಷೆ ಘೋಷಿಸುವಾಗ ರಾಹುಲ್ ಅವರು ಕೋರ್ಟಿನಲ್ಲಿ ಹಾಜರಿದ್ದರು.

- Advertisement -