ಕೋವಿಡ್ ನಿರ್ವಹಣೆ ಕುರಿತು ಹೈಕೋರ್ಟ್‌ಗಳ ವಿಚಾರಣೆಯಲ್ಲಿ ಮೂಗು ತೂರಿಸುವುದು ನಮ್ಮ ಉದ್ದೇಶವಲ್ಲ : ಸುಪ್ರೀಂ ಕೋರ್ಟ್ ಸ್ಪಷ್ಟನೆ

Prasthutha|

ಹೊಸದಿಲ್ಲಿ : ಸುಪ್ರೀಂಕೋರ್ಟ್‌ ದೇಶದಲ್ಲಿ ಕೊರೋನಾ ಹೆಚ್ಚಳದ ನಡುವೆ ಸ್ಥಿತಿಗತಿಗಳ ನಿರ್ವಹಣೆ ಬಗ್ಗೆ ತಿಳಿಯಲು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ತನ್ನ ಈ ಉದ್ದೇಶ ಹೈಕೋರ್ಟ್‌ಗಳ ಪ್ರಚಲಿತ ವಿಚಾರಣೆಗಳಲ್ಲಿ ಮೂಗು ತೂರಿಸುವುದು ಅಥವಾ ಅತಿಕ್ರಮಣ ನಡೆಸುವುದು ಅಲ್ಲ ಎಂದು ಸ್ಪಷ್ಟಪಡಿಸಿದೆ.

- Advertisement -

ದೇಶವಿಡೀ ಕೊರೋನಾ ದಿಂದ ತತ್ತರಿಸುತ್ತಿದ್ದು,  ಪ್ರತಿದಿನ ಸಾವಿರಾರು ಜನ ಸಾವನ್ನಪ್ಪುತ್ತಿದ್ದಾರೆ.  ಈ ‘ರಾಷ್ಟ್ರೀಯ ಬಿಕ್ಕಟ್ಟಿನ’ ಸಮಯದಲ್ಲಿ ಸುಮ್ಮನೆ ಮೂಕ ಪ್ರೇಕ್ಷಕರಂತೆ ಇರಲು ನಮಗೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸ್ವಯಂಪ್ರೇರಿತ ಪ್ರಕರಣ ದಾಖಲಿಸಿರುವ ಬಗ್ಗೆ ಕೆಲವು ವಕೀಲರು ಆಕ್ಷೇಪಣೆ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ  ಸ್ಪಷ್ಟನೆ ನೀಡಿದ ನ್ಯಾ. ಡಿ.ವೈ. ಚಂದ್ರಚೂಡ್‌ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ, ‘ಪ್ರಾದೇಶಿಕ ವ್ಯಾಪ್ತಿಯಲ್ಲಿ ಕೋವಿಡ್‌-19 ನಿರ್ವಹಣೆ, ಅವ್ಯವಸ್ಥೆಗಳ ಸರಿಪಡಿಸುವ ಬಗ್ಗೆ ಹೈಕೋರ್ಟ್‌ ಗಳಿಂದಲೇ ನಿಗಾ ವಹಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‌ ಕೇವಲ ಪೋಷಕ ಪಾತ್ರ ನಿರ್ವಹಿಸುತ್ತಿದೆ. ಕೆಲವು ರಾಷ್ಟ್ರೀಯ ವಿಚಾರಗಳಲ್ಲಿ ಸುಪ್ರೀಂ ಕೋರ್ಟ್ ಕೂಡ ನಿಗಾ ವಹಿಸುವಿಕೆಯ ಹೊಣೆ ಹೊರಲಿದೆ,’ ಎಂದು ಹೇಳಿದೆ.



Join Whatsapp