Home ಕ್ರೀಡೆ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ ರಾಜ್ಯದ ಮೂವರು ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ ಘೋಷಣೆ

ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ ರಾಜ್ಯದ ಮೂವರು ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ ಘೋಷಣೆ

ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್-2020ರ ಕ್ರೀಡಾಕೂಟದಲ್ಲಿ ರಾಜ್ಯದ ಕ್ರೀಡಾಪಟುಗಳು ಮತ್ತು ಕ್ರೀಡಾ ತರಬೇತುದಾರರಿಗೆ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಪ್ರೋತ್ಸಾಹ ಧನ ಪ್ರಕಟಿಸಿದ್ದಾರೆ.

ಅಥಿತಿ ಅಶೋಕ್ (ಗಾಲ್ಫ್), ಫೌದಾ ಮಿರ್ಜಾ (ಕುದುರೆ ಸವಾರಿ), ಶ್ರೀಹರಿ ನಟರಾಜ್ (ಈಜು) ಕ್ರೀಡಾಪಟುಗಳಿಗೆ ಹಾಗೂ ಕ್ರೀಡಾ ತರಬೇತುದಾರರಾದ ಅಂಕಿತಾ ಸುರೇಶ್ (ಮಹಿಳಾ ಹಾಕಿ ) ಅವರಿಗೆ ತಲಾ 1,00,000 ರೂಪಾಯಿ ಪ್ರೋತ್ಸಾಹ ಧನ ನೀಡಲಾಗುವುದು. ಇವರನ್ನು ಇವರನ್ನು ಶೀಘ್ರದಲ್ಲೇ ರಾಜಭವನದಲ್ಲಿ ಆಯೋಜಿಸುವ ಸಮಾರಂಭದಲ್ಲಿ ಸನ್ಮಾನಿಸಲಿದ್ದಾರೆ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್ ಪ್ರಭುಶಂಕರ್ ತಿಳಿಸಿದ್ದಾರೆ.

Join Whatsapp
Exit mobile version