Home ಟಾಪ್ ಸುದ್ದಿಗಳು ಫೆಲೆಸ್ತೀನ್ ಪರ ಹೋರಾಟಗಾರ್ತಿ, ಪತ್ರಕರ್ತೆ ನೆಮಿ ಅಲ್ ಹಸನ್ ರನ್ನು ಬೆಂಬಲಿಸಿದ ಜರ್ಮನ್ ಸಮಾನ ಮನಸ್ಕರು

ಫೆಲೆಸ್ತೀನ್ ಪರ ಹೋರಾಟಗಾರ್ತಿ, ಪತ್ರಕರ್ತೆ ನೆಮಿ ಅಲ್ ಹಸನ್ ರನ್ನು ಬೆಂಬಲಿಸಿದ ಜರ್ಮನ್ ಸಮಾನ ಮನಸ್ಕರು

ಬೆರ್ಲಿನ್: 2014 ರಲ್ಲಿ ಫೆಲೆಸ್ತೀನ್ ಐಕ್ಯತೆ ಪ್ರದರ್ಶನದಲ್ಲಿ ಭಾಗವಹಿಸಿದ ಹೋರಾಟಗಾರ್ತಿ, ಪತ್ರಕರ್ತೆ ನೆಮಿ ಅಲ್ ಹಸನ್ ರನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದ ಬಲಪಂಥೀಯ ಡಬ್ಲ್ಯುಡಿಆರ್ ಚಾನೆಲ್ ಷಡ್ಯಂತ್ರವನ್ನು ವಿರೋಧಿಸಿ ಜರ್ಮನಿಯ ಸಮಾನ ಮನಸ್ಕರಾದ ಸುಮಾರು 400 ಪತ್ರಕರ್ತರು, ಶಿಕ್ಷಣ ತಜ್ಞರು ಮತ್ತು ಸಾಂಸ್ಕೃತಿಕ ಸಂಪನ್ಮೂಲ ವ್ಯಕ್ತಿಗಳು ಐಕ್ಯತಾ ಪತ್ರಕ್ಕೆ ಸಹಿ ಹಾಕುವ ಬೆಂಬಲ ವ್ಯಕ್ತಪಡಿಸಿದರು.

ಇಪ್ಪತ್ತೆಂಟು ವರ್ಷದ ಅಲ್ ಹಸನ್ 2014 ರಲ್ಲಿ ಮೊದಲ ಬಾರಿಗೆ ಫೆಲೆಸ್ತೀನ್ ಜನತೆಯ ಐಕ್ಯತೆಗಾಗಿ ಅಲ್ ಕುದ್ಸ್ ಜಾಥಾದಲ್ಲಿ ಭಾಗವಹಿಸಿ ಗಮನ ಸೆಳೆದಿದ್ದರು.

ಫೆಲೆಸ್ತೀನ್ ಪರ ಧ್ವನಿಯಾದ ನೆಪದಲ್ಲಿ ಜರ್ಮನ್ ಬಲಪಂಥೀಯ ಪ್ರಕಾಶನ ಬಿಲ್ಡ್ ನಲ್ಲಿ ಆಕೆಯ ಫೋಟೊ ಬಹಿರಂಗವಾದ ಹಿನ್ನೆಲೆಯಲ್ಲಿ ಹಸನ್ ಅವರನ್ನು ಬಹಿಷ್ಕರಿಸಲಾಯಿತು.

ಡಬ್ಲ್ಯೂಡಿಆರ್ ತನ್ನ ವೆಬ್ ಸೈಟ್ ನಲ್ಲಿ “ ನಾವು ಯಾವುದೇ ಯಹೂದಿ ವಿರೋಧಿಗಳನ್ನು ಸಹಿಸುವುದಿಲ್ಲ. ಮಾತ್ರವಲ್ಲ ಅಲ್ ಕುದ್ಸ್ ಪರ ಜಾಥಾ, ಪ್ರತಿನಿಧಿಗಳನ್ನು ಅತ್ಯಂತ ಪ್ರಬಲವಾಗಿ ಖಂಡಿಸುತ್ತೇವೆ” ಎಂದು ತಿಳಿಸಿತ್ತು.

Join Whatsapp
Exit mobile version