ಬೆಂಗಳೂರು: ಮೇಲ್ವಿಚಾರಕಿಯೊಬ್ಬರು ಶಿರವಸ್ತ್ರ ಧರಿಸಿ ಪರೀಕ್ಷಾ ಕೊಠಡಿ ಪ್ರವೇಶಿಸಿದ ಕಾರಣಕ್ಕೆ ಅಮಾನತು ಆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನೂರ್ ಫಾತೀಮಾ ಅಮಾನತು ಆದ ಮೇಲ್ವಿಚಾರಕಿಯಾಗಿದ್ದಾರೆ.
ಮೇಲ್ವಿಚಾರಕಿ ನೂರ್ ಫಾತೀಮಾ ರಾಜಾಜಿನಗರದ ಕೆ ಟಿ ಎಸ್ ವಿ ಪರೀಕ್ಷಾ ಕೇಂದ್ರಕ್ಕೆ ಶಿರವಸ್ತ್ರ ಧರಿಸಿ ಬಂದಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಪರೀಕ್ಷಾ ಕರ್ತವ್ಯದಿಂದ ಅಮಾನತುಗೊಳಿಸಿ ಮತ್ತೊಬ್ಬ ಮೇಲ್ವಿಚಾರಕರಿಗೆ ಅವಕಾಶ ಮಾಡಿಕೊಡಲಾಗಿದೆ.
ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿಯೇ ಪರೀಕ್ಷೆಗೆ ಹಾಜರಾಗಬೇಕೆಂದು ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಮೇಲ್ವಿಚಾರಕರಿಗೆ ಈ ಆದೇಶ ಇರಲಿಲ್ಲ.