Home ಟಾಪ್ ಸುದ್ದಿಗಳು ಸನ್ ರೈಸರ್ಸ್ ಹೈದರಾಬಾದ್ ಮಣಿಸಿ ಫೈನಲ್ ಪ್ರವೇಶಿಸಿದ ಕೋಲ್ಕತಾ ನೈಟ್ ರೈಡರ್ಸ್

ಸನ್ ರೈಸರ್ಸ್ ಹೈದರಾಬಾದ್ ಮಣಿಸಿ ಫೈನಲ್ ಪ್ರವೇಶಿಸಿದ ಕೋಲ್ಕತಾ ನೈಟ್ ರೈಡರ್ಸ್

ಅಹ್ಮದಾಬಾದ್: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ ಕೋಲ್ಕತಾ ನೈಟ್ ರೈಡರ್ಸ್ ಫೈನಲ್ ಪ್ರವೇಶಿಸಿದೆ. ಈ ಮೂಲಕ ಕೋಲ್ಕತ್ತಾ ತಂಡ 4ನೇ ಬಾರಿಗೆ ಐಪಿಎಲ್ ಟೂರ್ನಿಯ ಫೈನಲ್ ಪ್ರವೇಶಿಸಿದೆ. ಅಲ್ಲದೆ, ಐಪಿಎಲ್ ಇತಿಹಾಸದಲ್ಲಿ ತನ್ನ 2ನೇ ಅತೀ ದೊಡ್ಡ ಗೆಲುವನ್ನು ಕೋಲ್ಕತಾ ತಂಡ ದಾಖಲಿಸಿದೆ.

ಅಹ್ಮದಾಬಾದ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ 159 ರನ್ಸ್‌ಗೆ ಆಲೌಟ್ ಆಗಿತ್ತು. ಕೋಲ್ಕತಾ ತಂಡ 15 ಓವರ್‌ನಲ್ಲೇ ಕೇವಲ 2 ವಿಕೆಟ್ ಕಳೆದುಕೊಂಡು 160 ರನ್‌ಗಳ ಗುರಿಯನ್ನು ಮುಟ್ಟಿತು.

ಹೈದರಾಬಾದ್ ನೀಡಿದ 160 ರನ್ ಗಳ ಗುರಿ ಕೋಲ್ಕತಾಗೆ ಯಾವುದೇ ಹಂತದಲ್ಲೂ ಸವಾಲು ಎನಿಸಿದ್ದು ಕಂಡು ಬರಲಿಲ್ಲ. ಇನ್ನಿಂಗ್ಸ್ ಆರಂಭದಿಂದಲೂ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ಕೋಲ್ಕತಾ ಪರವಾಗಿ ವೆಂಕಟೇಶ್ ಅಯ್ಯರ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅವರ ಭರ್ಜರಿ ಬ್ಯಾಟಿಂಗ್ ನಡೆಸಿದರು. ಪಂದ್ಯ ಜಯಿಸಿ ತಂಡ ಅರ್ಹವಾಗಿಯೇ ಫೈನಲ್ ಪ್ರವೇಶಿಸಿತು.

ಹೈದರಾಬಾದ್ ಪರ ನಟರಾಜನ್ ಮತ್ತು ನಾಯಕ ಪ್ಯಾಟ್ ಕಮಿನ್ಸ್ ತಲಾ 1 ವಿಕೆಟ್ ಪಡೆದರು.

Join Whatsapp
Exit mobile version