ಬೆಂಗಳೂರು: ಮುಂದಿನ ಮೂರು ವಾರ ಗರಿಷ್ಠ ಬಿಸಲಿನ ಪ್ರಮಾಣ ಏರಿಕೆ ಸೂಚನೆ ಬೆನ್ನಲೆ ಆರೋಗ್ಯ ಇಲಾಖೆ ಮತ್ತೊಂದು ಮಾರ್ಗಸೂಚಿ ನೀಡಿದೆ.
ಬೇಸಿಗೆ ಬಿಸಲಿನ ಏರಿಕೆ ಹಿನ್ನಲೆ ಕಾರ್ಮಿಕರು ಏನು ಮಾಡಬೇಕು. ಯಾವ ರೀತಿಯಲ್ಲಿ ರಕ್ಷಣೆ ಪಡೆದುಕೊಳ್ಳಬೇಕು ಹೇಗೆ ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು ಜೊತೆಗೆ ಎಲೆಕ್ಷನ್ ಕ್ಯಾಂಪನ್ ಹಿನ್ನಲೆ ಮಾರ್ಗಸೂಚಿ ನೀಡಿದೆ.
ಸರಕಾರದ ಮಾರ್ಗಸೂಚಿಯಲ್ಲೇನಿದೆ?:
► ಹೆಚ್ಚು ನೀರನ್ನು ಕುಡಿಯಿರಿ. ಮಜ್ಜಿಗೆ/ ಎಳನೀರು, ಹಣ್ಣಿನ ರಸವನ್ನು ಹೆಚ್ಚಾಗಿ ಸೇವಿಸಬಹುದು.
► ನೀರಿನ ಅಂಶ ಹೆಚ್ಚಾಗಿರುವ ತರಕಾರಿ, ಹಣ್ಣುಗಳನ್ನು ಸೇವಿಸುವುದು ಉತ್ತಮ.
► ಸಡಿಲವಾದ ತೆಳು ಬಣ್ಣದ ಹತ್ತಿಯ ಬಟ್ಟೆಯನ್ನು ಧರಿಸಿರಿ, ಗಾಳಿಯಾಡುವ ಪಾದರಕ್ಷೆ ಧರಿಸಿ.
► ಹೊರಗಡೆ ತೆರಳುವ ವೇಳೆ ತಂಪು ಕನ್ನಡಕ, ಛತ್ರಿ, ಟವೆಲ್ ಅಥವಾ ಬಿಸಿಲಿನಿಂದ ಕಾಪಾಡಿಕೊಳ್ಳುವ ಸಾಮಾನ್ಯ ಕ್ರಮಗಳನ್ನು ಪಾಲಿಸಿ.
► ರೇಡಿಯೊ, ದೂರದರ್ಶನ ಅಥವಾ ದಿನಪತ್ರಿಕೆಗಳ ಮೂಲಕ ಸ್ಥಳೀಯ ಹವಾಮಾನ ಮಾಹಿತಿಯನ್ನು ಪಡೆದು, ಅದರಂತೆ ದೈನಂದಿನ ಚಟುವಟಿಕೆಗಳನ್ನು ಯೋಜಿಸಿಕೊಳ್ಳಿ.