Home ಟಾಪ್ ಸುದ್ದಿಗಳು ಹಣ, ಕೊಳಿ ಮಾಂಸ ಹಂಚಿ ಚುನಾವಣೆ ಗೆದ್ದ ಆರೋಪ: ರೇವಣ್ಣಗೆ ಸಮನ್ಸ್ ಜಾರಿ

ಹಣ, ಕೊಳಿ ಮಾಂಸ ಹಂಚಿ ಚುನಾವಣೆ ಗೆದ್ದ ಆರೋಪ: ರೇವಣ್ಣಗೆ ಸಮನ್ಸ್ ಜಾರಿ

ಬೆಂಗಳೂರು: ಹಣ ಮತ್ತು ಕೊಳಿ ಮಾಂಸ ಹಂಚಿ ಚುನಾವಣೆ ಗೆದ್ದರುವುದಾಗಿ ಆರೋಪಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಶಾಸಕ ಹೆಚ್.ಡಿ.ರೇವಣ್ಣಗೆ ಹೈಕೋರ್ಟ್ ಸಮನ್ಸ್ ಜಾರಿ ಮಾಡಿದೆ.


ಹೊಳೆನರಸೀಪುರ ಪರಾಜಿತ ಅಭ್ಯರ್ಥಿ ದೇವರಾಜೇಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ನ್ಯಾಯಪೀಠ ಸಮನ್ಸ್ ಜಾರಿ ಮಾಡಿ ವಿಚಾರಣೆಯನ್ನು ಸೆಪ್ಟಂಬರ್ 4 ಕ್ಕೆ ಮುಂದೂಡಿದೆ. ರೇವಣ್ಣ ಅವರು ಚುನಾವಣೆ ಅಕ್ರಮದಿಂದ ಶಾಸಕರಾಗಿದ್ದು, ಅವರನ್ನು ಅನರ್ಹಗೊಳಿಸಿ ಮೂರನೇ ಸ್ಥಾನದಲ್ಲಿರುವ ತನ್ನನ್ನು ಶಾಸಕ ಎಂದು ಘೋಷಿಸುವಂತೆ ದೇವರಾಜೇಗೌಡ ಸಲ್ಲಿಸಿರುವ ಅರ್ಜಿಯಲ್ಲಿ ಕೋರಿದ್ದಾರೆ.

Join Whatsapp
Exit mobile version