ಮಂಡ್ಯ: ಬಿಜೆಪಿ ಟಿಕೆಟ್ ಸಿಕ್ಕರೂ ಸಿಗದಿದ್ದರೂ ಮಂಡ್ಯದಲ್ಲೆ ಸುಮಲತಾ ಸ್ಪರ್ಧಿಸಲಿದ್ದಾರೆ. ಸುಮಲತಾ ಮಂಡ್ಯ ಕಣದಲ್ಲಿ ಇದ್ದೇ ಇರಲಿದ್ದಾರೆ ಎಂದು ಸಂಸದೆ ಸುಮಲತಾ ಆಪ್ತ ಹನಕೆರೆ ಶಶಿಕುಮಾರ್ ಹೇಳಿದ್ದಾರೆ.
ನಾಳೆ ಸಂಜೆ 4 ಗಂಟೆಗೆ ಜೆಪಿ ನಗರ ನಿವಾಸದಲ್ಲಿ ಬೆಂಬಲಿಗರ ಸಭೆ ಕರೆದಿದ್ದೇವೆ ಎಂದು ಶಶಿಕುಮಾರ್ ಹೇಳಿದ್ದಾರೆ.
ಪ್ರಸ್ತುತ ರಾಜಕೀಯ ಬೆಳವಣಿಗೆ ಕುರಿತು ಸಭೆ ಕರೆಯಲಾಗಿದೆ. ಚುನಾವಣೆಯಲ್ಲಿ ಸುಮಲತಾ ಯಾವ ನಿರ್ಧಾರ ಮಾಡಬೇಕು ಎಂದು ಸಭೆಯಲ್ಲಿ ಅಂತಿಮ ನಿರ್ಧಾರವಾದಲಿದೆ ಎಂದರು.
ಪ್ರಧಾನಿ ಮೋದಿ ಮತ್ತು ನಡ್ಡಾ ಅವರನ್ಬು ಸುಮಲತಾ ಭೇಟಿ ಮಾಡಿದ್ದಾರೆ. ಹೀಗಾಗಿ ಟಿಕೆಟ್ ನಮಗೆ ಸಿಗುವ ಭರವಸೆ ಇದೆ. ಆದರೆ ಮಂಡ್ಯದಿಂದ ಸುಮಲತಾ ಅಂಬರೀಶ್ ಅವ್ರ ಸ್ಪರ್ಧೆ ಖಂಡಿತವಾಗಿ ಇರಲಿದೆ” ಎಂದರು.