Home ಟಾಪ್ ಸುದ್ದಿಗಳು ಹಣಕ್ಕಾಗಿ ಟಿಕೆಟ್ ಮಾರಾಟ: ಸ್ಟಾರ್ ಚಂದ್ರು ವಿರುದ್ಧ ಸುಮಲತಾ ಆರೋಪ

ಹಣಕ್ಕಾಗಿ ಟಿಕೆಟ್ ಮಾರಾಟ: ಸ್ಟಾರ್ ಚಂದ್ರು ವಿರುದ್ಧ ಸುಮಲತಾ ಆರೋಪ

ಮಂಡ್ಯ: ಹಣಕ್ಕಾಗಿ ಟಿಕೆಟ್ ಮಾರಾಟ ಆಗಿದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ವಿರುದ್ಧ ಸಂಸದೆ ಸುಮಲತಾ ಅಂಬರೀಶ್ ಆರೋಪ ಮಾಡಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2024 ರ ಲೋಕಸಭಾ ಚುನಾವಣೆಗೆ ಮಂಡ್ಯದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರು ಅವರಿಗೆ ಟಿಕೆಟ್ ನೀಡಲಾಗಿದೆ. ಸರ್ಕಾರದ ಆಡಳಿತ ಯಂತ್ರವನ್ನು ದುರುಪಯೋಗ ಮಾಡಿಕೊಂಡು, ಹಣಕ್ಕಾಗಿ ಟಿಕೆಟ್ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.


ಸ್ಟಾರ್ ಚಂದ್ರು ಅವರೊಬ್ಬ ಕಾಂಟ್ರಾಕ್ಟರ್. ಮಂಡ್ಯ ಜಿಲ್ಲೆಯವರು ಅಂತಾ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿಲ್ಲ. ಈವರೆಗೂ ರಾಜಕಾರಣದಲ್ಲಿಯೇ ಗುರಿತಿಸಿಕೊಂಡಿರದ ವ್ಯಕ್ತಿ ಸ್ಟಾರ್ ಚಂದ್ರು. ಮಂಡ್ಯದ ಕಾಂಗ್ರೆಸ್ ಟಿಕೆಟ್ ಬಗ್ಗೆ ನಾನು ಮಾತ್ರ ಅಲ್ಲ, ಇಡೀ ಜಿಲ್ಲೆಯವರೇ ಹೇಳುತ್ತಾರೆ ಎಂದಿದ್ದಾರೆ.

Join Whatsapp
Exit mobile version