ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಮರಸಂಕ ಗ್ರಾಮದ ಜನರಿಗೆ ತಮ್ಮ ಗ್ರಾಮದಿಂದ ಪಟ್ಟಣಕ್ಕೆ ತೆರಳಲು ಜೀವ ಪಣಕ್ಕಿಟ್ಟು ಬರಬೇಕಾಗಿದೆ. ಇಲ್ಲಿನ ಜನರು ಪಟ್ಟಣಕ್ಕೆ ಬರಬೇಕಾದರೆ ಸೆತುವೆಯಿಲ್ಲದ ತುಂಬಿ ಹರಿಯುತ್ತಿರುವ ನದಿ ದಾಟಬೇಕು.
ಇಲ್ಲಿನ ದೇವಕಿ ಎಂಬ ಕಾಲು ಮುರಿತಕ್ಕೊಳಗಾದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲು ತುಂಬಿ ಹರಿಯುತ್ತಿರುವ ಹೊಳೆಯಲ್ಲಿ ಯುವಕರು ಅಪಾಯವನ್ನು ಲೆಕ್ಕಿಸದೆ ಸ್ಟ್ರೆಚರ್ ಹೊತ್ತು ಹೊಳೆ ದಾಟುತ್ತಿರುವ ವೀಡಿಯೋ ವೈರಲ್ ಆಗಿದೆ.
ಮರಸಂಕ ಎಂಬ ಪ್ರದೇಶದಲ್ಲಿ ಸುಮಾರು ಒಂಬತ್ತು ಮನೆಗಳಿದ್ದು 50 ಜನ ವಾಸಿಸುತ್ತಿದ್ದಾರೆ. ಹಲವು ವರ್ಷಗಳಿಂದ ಇಲ್ಲಿನ ಜನರು ಪಯಸ್ಸಿನಿ ನದಿಗೆ ಸೇರುವ ತುಂಬಿ ಹರಿಯುವ ಸೇತುವೆಯಿಲ್ಲದ ಕಿರು ನದಿ ದಾಟಬೇಕಾಗಿದೆ. ಮಳೆಗಾಲದಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಈ ನದಿಗೆ ಸೇತುವೆ ನಿರ್ಮಿಸಲು ಇಲ್ಲಿನ ಶಾಸಕ ಹಾಗೂ ಸಚಿವರೂ ಆದಂತಹ ಎಸ್ ಅಂಗಾರ ಅವರಿಗೆ ಹಲವು ವರ್ಷಗಳಿಂದ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎನ್ನುತ್ತಾರೆ ಇಲ್ಲಿನ ಜನರು.