Home ಕರಾವಳಿ ಸುಳ್ಯ| ರಸ್ತೆಯಲ್ಲಿ ಕುಸಿದು ಬಿದ್ದು ಮಹಿಳೆ ಮೃತ್ಯು; ಮೃತದೇಹ ಮನೆಗೆ ತಲುಪಿಸಲು ನೆರವಾದ ಮುಸ್ಲಿಂ ಮಹಿಳೆ

ಸುಳ್ಯ| ರಸ್ತೆಯಲ್ಲಿ ಕುಸಿದು ಬಿದ್ದು ಮಹಿಳೆ ಮೃತ್ಯು; ಮೃತದೇಹ ಮನೆಗೆ ತಲುಪಿಸಲು ನೆರವಾದ ಮುಸ್ಲಿಂ ಮಹಿಳೆ

ಸುಳ್ಯ: ಮಹಿಳೆಯೊಬ್ಬರು ಹೃದಯಾಘಾತದಿಂದ ರಸ್ತೆಯಲ್ಲಿ ಕುಸಿದು ಬಿದ್ದು  ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಜಟ್ಟಿಪಳ್ಳದಲ್ಲಿ ನಡೆದಿದೆ.

ಮೃತ ಮಹಿಳೆ ಜಟ್ಟಿಪಳ್ಳ ಕಟ್ಟೆ ಬಳಿ ನಿವಾಸಿ ಪದ್ಮಾವತಿ (55) ಎಂದು ಗುರುತಿಸಲಾಗಿದೆ. ಮನೆಯಿಂದ ಸುಳ್ಯಕ್ಕೆ ನಡೆದುಕೊಂಡು ಬರುತ್ತಿರುವ ಸಂದರ್ಭದಲ್ಲಿ ಜಟ್ಟಿಪಳ್ಳ ಅಂಗನವಾಡಿ ಬಳಿ ಕುಸಿದು ಬಿದ್ದುಮೃತಪಟ್ಟಿದ್ದಾರೆ. ತಕ್ಷಣವೇ ಸ್ಥಳೀಯರು ಸೇರಿ ಸುಳ್ಯ ಸರಕಾರಿ ಆಸ್ಪತ್ರೆ ಗೆ ಕೊಂಡೊಯ್ದರಾದರೂ ಆ ವೇಳೆ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ ಹಿನ್ನೆಲೆಯಲ್ಲಿ ಮೃತಶರೀರವನ್ನು ಪದ್ಮಾವತಿ ಅವರ ಮನೆಗೆ ಕೊಂಡು ಹೋಗಿದ್ದಾರೆ.

ಪದ್ಮಾವತಿಯವರ ಮೃತದೇಹವನ್ನು ಆಂಬುಲೆನ್ಸ್ ಮೂಲಕ ಮನೆಗೆ ಕೊಂಡೊಯ್ಯಲು ನೆರೆಮನೆಯ ಮುಸ್ಲಿಂ ಮಹಿಳೆ ಝುಬೈದಾ ನೆರವಾಗಿ ಮಾನವೀಯತೆ ಮೆರೆದಿದ್ದಾರೆ.

ರಸ್ತೆಯಲ್ಲಿ ಕುಸಿದು ಬಿದ್ದ ಪದ್ಮಾವತಿಯವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ ಎಂಬ ವಿಷಯ ತಿಳಿದ ಕೂಡಲೇ ತಮ್ಮ ಮಗನ ಆಟೋದಲ್ಲಿ ಆಸ್ಪತ್ರೆಗೆ ತೆರಳಿದ ಝುಬೈದಾ ರವರಿಗೆ ಪದ್ಮಾವತಿ ಮೃತ ರಾಗಿರುವ ವಿಷಯ ತಿಳಿದಿದೆ.

ಮೃತದೇಹವನ್ನು ಆಂಬುಲೆನ್ಸ್ ನಲ್ಲಿ ಇರಿಸಲು ಸ್ವತಃ ಝುಬೈದಾ ನೆರವಾಗಿದ್ದು, ತಾನು ಕೂಡ ಅದೇ ಆಂಬುಲೆನ್ಸ್ ನಲ್ಲಿ ಮೃತದೇಹದೊಂದಿಗೆ ಪದ್ಮಾವತಿಯವರ ಮನೆಗೆ ಬಂದಿದ್ದಾರೆ. 

ಸ್ನೇಹಿತೆಯ ಅಗಲುವಿಕೆಯನ್ನು ನೆನೆದು ದುಃಖಿಸುತ್ತಿದ್ದ ಝುಬೈದಾರವರ ಸೌಹಾರ್ದತೆಯ ಭಾವ ಸ್ಥಳೀಯ ಜನರಲ್ಲಿ ಪ್ರಶಂಸೆಗೆ ಕಾರಣವಾಯಿತು.

Join Whatsapp
Exit mobile version