Home ಟಾಪ್ ಸುದ್ದಿಗಳು ಸುಳ್ಯ: ಪತ್ನಿ, ಮಗನೊಂದಿಗೆ ವಿಶ್ವದ ಅತಿ ಎತ್ತರದ ಉಮ್ಲಿಂಗ್ ಲಾ ಗೆ ತಲುಪಿದ ತೌಹೀದ್ ರೆಹ್ಮಾನ್

ಸುಳ್ಯ: ಪತ್ನಿ, ಮಗನೊಂದಿಗೆ ವಿಶ್ವದ ಅತಿ ಎತ್ತರದ ಉಮ್ಲಿಂಗ್ ಲಾ ಗೆ ತಲುಪಿದ ತೌಹೀದ್ ರೆಹ್ಮಾನ್

►ಇಂಡಿಯಾ ರೆಕಾರ್ಡ್ ಬುಕ್ ನಲ್ಲಿ ದಾಖಲೆ ಸೇರ್ಪಡೆ

ಸುಳ್ಯ: ಉದ್ಯಮಿ ಯೊಬ್ಬರು ಬುಲೆಟ್ ಬೈಕ್ ನಲ್ಲಿ ಪತ್ನಿ,ಮೂರೂವರೆ ವರ್ಷದ ಮಗುವಿನೊಂದಿಗೆ ವಿಶ್ವದ ಅತಿ ಎತ್ತರದ ಉಮ್ಲಿಂಗ್ ಪ್ರದೇಶ ತಲುಪುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.


ಸುಳ್ಯದ ಹಳೆಗೇಟಿನ ತೌಹೀದ್ ರೆಹ್ಮಾನ್ ಅವರು ಪತ್ನಿ ಜಶ್ಮಿಯಾ ಮತ್ತು ಮಗ ಜಝೀಲ್ ರೆಹ್ಮಾನ್ ಅವರು ಬುಲೆಟ್ ನಲ್ಲಿ ಉಮ್ಮಿಂಗ್ ಲಾ ತೆರಳಿದ್ದರೂ.
ಸುಮಾರು 19,024 ಅಡಿ ಎತ್ತರದ ಮತ್ತು ಆಮ್ಲಜನಕದ ಮಟ್ಟವು 50 ಶೇ. ಕ್ಕಿಂತ ಕಡಿಮೆ ಇರುವ ಈ ಸ್ಥಳಕ್ಕೆ ರೆಹ್ಮಾನ್ ಬೈಕ್ ನಲ್ಲಿ ತಲುಪಿದ ಅತ್ಯಂತ ಕಿರಿಯವರು ಎನಿಸಿಕೊಂಡಿದ್ದಾರೆ. ಇಂಡಿಯಾ ರೆಕಾರ್ಡ್ ಬುಕ್ ನಲ್ಲಿ ಈ ದಾಖಲೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ.


ಲಡಾಕ್ನ ಚೀನದ ಗಡಿಯಲ್ಲಿರುವ ಉಮ್ಲಿಂಗ್ ಲಾ ವಿಶ್ವದ ಅತೀ ಎತ್ತರದ ಮೋಟಾರು ರಸ್ತೆಯಾಗಿದೆ. ಇದರ ಎತ್ತರವು ಸರಿಸುಮಾರು 19,024 ಅಡಿ ಆಗಿದ್ದು, ಇದು 52 ಕಿ.ಮೀ. ರಸ್ತೆಯಾಗಿದ್ದು, ಚಿಶುಮ್ಮೆಯನ್ನು ಡೆಮ್ ಚೋಕ್ ಗೆ ಸಂಪರ್ಕಿಸುತ್ತದೆ. ಇದು ಗಡಿ ನಿಯಂತ್ರಣ ರೇಖೆಯಲ್ಲಿದೆ. (ಎಲ್ಎಸಿ) ಭಾರತ ಮತ್ತು ಚೀನ ನಡುವಿನ ಘರ್ಷಣೆಯ ಬಿಂದುವಾಗಿದೆ.


ರೆಹ್ಮಾನ್ ಅವರು ಆ.15ರಂದು ಸುಳ್ಯದಿಂದ ಹೊರಟಿದ್ದ ರೆಹ್ಮಾನ್ 19 ದಿನಗಳಲ್ಲಿ ಉಮ್ಮಿಂಗ್ ಲಾ ತಲುಪಿದ್ದಾರೆ. ಅಲ್ಲಿ ರಾಷ್ಟ್ರಧ್ವಜ, ಕನ್ನಡ ಧ್ವಜ, ತುಳುನಾಡಿನ ಬಾವುಟವನ್ನು ಹಾರಿಸಿದ್ದಾರೆ. 5 ಸಾವಿರ ಕಿ.ಮೀ. ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

Join Whatsapp
Exit mobile version