Home ಟಾಪ್ ಸುದ್ದಿಗಳು ಸುಳ್ಯ: ಪತ್ನಿಯನ್ನು ಗುಂಡಿಕ್ಕಿ ಕೊಂದು ಆತ್ಮ*ಹತ್ಯೆಗೆ ಶರಣಾದ ಪತಿ

ಸುಳ್ಯ: ಪತ್ನಿಯನ್ನು ಗುಂಡಿಕ್ಕಿ ಕೊಂದು ಆತ್ಮ*ಹತ್ಯೆಗೆ ಶರಣಾದ ಪತಿ

ಸುಳ್ಯ: ಪತ್ನಿಯನ್ನು ಗುಂಡಿಕ್ಕಿ ಕೊಲೆಗೈದ ಪತಿ ಬಳಿಕ ತಾನೂ ವಿಷ ಸೇವಿಸಿ ಆತ್ಮ*ಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ಎಂಬಲ್ಲಿ ತಡರಾತ್ರಿ ನಡೆದಿದೆ.

ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ನಿವಾಸಿ, ಕೃಷಿಕ ರಾಮಚಂದ್ರ ಗೌಡ ಅಲಿಯಾಸ್ ಚಂದ್ರ (54) ಕೃತ್ಯ ಎಸಗಿ ಆತ್ಮಹತ್ಯೆ ಮಾಡಿಕೊಂಡವರು. ಅವರ ಪತ್ನಿ ವಿನೋದ (43) ಹತ್ಯೆಗೊಳಗಾದವರು. ತನ್ನದೇ ಲೈಸನ್ಸ್ ಹೊಂದಿದ್ದ ಕೋವಿಯಲ್ಲಿ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಮೃತ ರಾಮಚಂದ್ರ ಕಳೆದ ರಾತ್ರಿ ಕುಡಿದು ಬಂದಿದ್ದು, ಊಟ ಮಾಡಿದ ಬಳಿಕ ಕ್ಷುಲ್ಲಕ ಕಾರಣಕ್ಕೆ ಪತ್ನಿ ಹಾಗೂ ಪುತ್ರನೊಡನೆ ಜಗಳ ಆರಂಭಿಸಿದ್ದು, ಬಳಿಕ ಗಲಾಟೆ ವಿಪರೀತವಾಗಿದ್ದು ಅವಾಚ್ಯ‌ ಶಬ್ದಗಳಿಂದ ‌ನಿಂದಿಸಲಾಗಿತ್ತು ಎನ್ನಲಾಗಿದೆ. ಇದು ಮುಂದುವರೆದು ಕೃತ್ಯ ನಡೆದಿದೆ ಎನ್ನಲಾಗಿದೆ.

Join Whatsapp
Exit mobile version