Home ಕರಾವಳಿ ಸುಳ್ಯ: ಗುಂಡಿ ತೆಗೆಯುವಾಗ ಗುಹೆ, ಪ್ರಾಚೀನ ಪರಿಕರಗಳು ಪತ್ತೆ !

ಸುಳ್ಯ: ಗುಂಡಿ ತೆಗೆಯುವಾಗ ಗುಹೆ, ಪ್ರಾಚೀನ ಪರಿಕರಗಳು ಪತ್ತೆ !

ಸುಳ್ಯ: ಜಮೀನಿನಲ್ಲಿ ಗುಂಡಿ ತೆಗೆಯುವಾಗ ಗುಹೆ ಪತ್ತೆಯಾಗಿ ಅದರಲ್ಲಿ ಪ್ರಾಚೀನ ಕಾಲದ ಮಣ್ಣಿನ ಪರಿಕರಗಳು ಪತ್ತೆಯಾಗಿರುವ ಘಟನೆ ಕಡಬ ತಾಲೂಕಿನ ಎಡಮಂಗಲ ಗ್ರಾಮದಲ್ಲಿ ನಡೆದಿದೆ.


ರಬ್ಬರ್ ತೋಟ ತೆರವು ಮಾಡಿ ಅಡಕೆ ತೋಟ ಮಾಡುವ ಉದ್ದೇಶದಿಂದ ಜೆಸಿಬಿ ಯಂತ್ರದ ಮೂಲಕ ಅಡಕೆ ಗುಂಡಿ ತೆಗೆಯುವಾಗ ಇವು ಕಾಣಿಸಿಕೊಂಡಿದೆ.


ಗುಹೆಯಲ್ಲಿ ಮಣ್ಣಿನ ಮಡಿಕೆ, ಬಟ್ಟಲು, ಸಣ್ಣ-ಪುಟ್ಟ ಪಾತ್ರೆಗಳ ಅವಶೇಷಗಳು ಪತ್ತೆಯಾಗಿದೆ.
ಇನ್ನು ಇದನ್ನು ಉದ್ದೇಶಪೂರ್ವಕವಾಗಿ ಸಣ್ಣ ಮಾದರಿಯ ಗುಹೆ ತೋಡಿ ಪರಿಕರಗಳನ್ನು ಇದರಲ್ಲಿ ಹೂತು ಮುಚ್ಚಿರಬಹುದು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

Join Whatsapp
Exit mobile version