Home ಟಾಪ್ ಸುದ್ದಿಗಳು ಸುಳ್ಯ | ಅಣ್ಣನ ಹತ್ಯೆ ಪ್ರಕರಣ: ಸಹೋದರರು ಪೊಲೀಸ್ ಕಸ್ಟಡಿಗೆ

ಸುಳ್ಯ | ಅಣ್ಣನ ಹತ್ಯೆ ಪ್ರಕರಣ: ಸಹೋದರರು ಪೊಲೀಸ್ ಕಸ್ಟಡಿಗೆ

ಸುಳ್ಯ: ಇಲ್ಲಿನ ಚೆಂಬು ಗ್ರಾಮದ ಕುದ್ರೆಪಾಯ ಎಂಬಲ್ಲಿ ಆಸ್ತಿ ವಿವಾದಕ್ಕೆ ಸಹೋದರರಿಂದ ಹತ್ಯೆಯಾದ ಸಂಪ್ಯದ ಉಸ್ಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.


ಉಸ್ಮಾನ್ ಸಹೋದರರಾದ ರಫೀಕ್ ಮತ್ತು ಸತ್ತಾರ್ ಆರೋಪಿಗಳಾಗಿದ್ದಾರೆ.


ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಣ್ಣ ಉಸ್ಮಾನ್ ರನ್ನ ಚೂರಿಯಿಂದ ಇರಿದು ಜುಲೈ 14ರಂದು ಕೊಲೆ ಮಾಡಿ ಬಳಿಕ ಅವರು ರಿಕ್ಷಾದಲ್ಲಿ ಅರಂತೋಡುವರೆಗೆ ಬಂದು ಮತ್ತೊಂದು ರಿಕ್ಷದಲ್ಲಿ ಸುಳ್ಯಕ್ಕೆ ಬಂದು ಕೇರಳ ಕಡೆಗೆ ಪರಾರಿಯಾಗಿದ್ದರು. ಆರೋಪಿಗಳನ್ನು ಶನಿವಾರ ರಾತ್ರಿ ಕೊಡಗು ಪೊಲೀಸರು ಬಂಧಿಸಿ ಇಂದು ಮಡಿಕೇರಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

Join Whatsapp
Exit mobile version