Home ಕರಾವಳಿ ಮಂಗಳೂರು: ತಂದೆಯಿಂದಲೇ ಮಗನ ಮೇಲೆ ಫೈರಿಂಗ್ ಪ್ರಕರಣ | ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಸುಧೀಂದ್ರ

ಮಂಗಳೂರು: ತಂದೆಯಿಂದಲೇ ಮಗನ ಮೇಲೆ ಫೈರಿಂಗ್ ಪ್ರಕರಣ | ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಸುಧೀಂದ್ರ

ಮಂಗಳೂರು: ತಂದೆಯಿಂದಲೇ ಗುಂಡೇಟಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಪುತ್ರ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ. ಮೆದುಳು ನಿಷ್ಕ್ರಿಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿ ಸುಧೀಂದ್ರ ಪ್ರಭು(16) ಇಂದು ಮುಂಜಾವ 5 ರ ವೇಳೆಗೆ ಸಾವನ್ನಪ್ಪಿದ್ದಾನೆ.


ಅಕ್ಟೋಬರ್ 5 ರ ಸಾಯಂಕಾಲ ನಗರದ ಮೋರ್ಗನ್ಸ್ ಗೇಟ್ ಬಳಿ ನಡೆದಿದ್ದ ಗಲಾಟೆ ಸಂದರ್ಭ ನೌಕರರ ಮೇಲೆ ವೈಷ್ಣವಿ ಟ್ರಾನ್ಸ್ ಪೋರ್ಟ್ ಮಾಲಕ ರಾಜೇಶ್ ಪ್ರಭು ಎರಡು ಸುತ್ತಿನ ಗುಂಡು ಹಾರಿಸಿದ್ದರು. ಈ ಸಂದರ್ಭ ಅಲ್ಲೇ ಇದ್ದ ಅವರ ಪುತ್ರ ಸುಧೀಂದ್ರ ಪ್ರಭುಗೆ ತಾಗಿದ ಗುಂಡು ಎಡ ಕಣ್ಣಿನ ಭಾಗದಿಂದ ತಲೆಯೊಳಗೆ ಹೊಕ್ಕ ಪರಿಣಾಮ ಗಂಭೀರ ಗಾಯವಾಗಿತ್ತು. ಕೋಮಾದಲ್ಲಿದ್ದ ಸುಧೀಂದ್ರ ಪ್ರಭು‌ ಮೆದುಳು ನಿಷ್ಕ್ರಿಯಗೊಂಡಿದ್ದಾಗಿ ಬಳಿಕ ಆಸ್ಪತ್ರೆ ವೈದ್ಯರು ಘೋಷಿಸಿದ್ದರು.


ಘಟನೆ ಸಂಬಂಧ ಪಾಂಡೇಶ್ವರ ಠಾಣೆಯಲ್ಲಿ ದಾಖಲಾದ ದೂರಿನಂತೆ ಈಗಾಗಲೇ ರಾಜೇಶ್ ಪ್ರಭುನನ್ನು ಪೊಲೀಸರು ಬಂಧಿಸಿದ್ದಾರೆ.

Join Whatsapp
Exit mobile version