Home ಟಾಪ್ ಸುದ್ದಿಗಳು ಸುಧಾಕರ್ ನೂರಕ್ಕೆ ನೂರಷ್ಟು ಜೈಲಿಗೆ ಹೋಗುತ್ತಾರೆ: ಸಿದ್ದರಾಮಯ್ಯ

ಸುಧಾಕರ್ ನೂರಕ್ಕೆ ನೂರಷ್ಟು ಜೈಲಿಗೆ ಹೋಗುತ್ತಾರೆ: ಸಿದ್ದರಾಮಯ್ಯ

ಚಿಕ್ಕಬಳ್ಳಾಪುರ: ಮಾಜಿ ಸಚಿವ ಡಾ. ಕೆ ಸುಧಾಕರ್ ಜೈಲಿಗೆ ಹೋಗುವ ಸ್ಥಿತಿ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪರವಾಗಿ ಪ್ರಚಾರ ನಡೆಸಿದ ವೇಳೆ ಮಾತನಾಡಿ, ‘ಸುಧಾಕರ್ ಆರೋಗ್ಯ ಸಚಿವನಾಗಿದ್ದಾಗ ರಾಜ್ಯದಲ್ಲಿ ಬಹಳಷ್ಟು ಭ್ರಷ್ಟಾಚಾರ ಮಾಡಿದ್ದಾರೆ. ಭ್ರಷ್ಟರು ಸಂಸತ್ ಗೆ ಹೋದರೆ ಭ್ರಷ್ಟಾಚಾರ ಮತ್ತಷ್ಟು ಹೆಚ್ಚಾಗುತ್ತದೆ. ಅವರ ಕುರಿತ ಹಗರಣದ ತನಿಖೆಗೆ ಈಗಾಗಲೇ ಆಯೋಗ ರಚಿಸಿದ್ದೇವೆ. ಮಾಹಿತಿ ಪ್ರಕಾರ ಎಲ್ಲಾ ದಾಖಲೆಗಳು ಅವರ ವಿರುದ್ಧವೇ ಇದೆ. ಹಾಗಾಗಿ ಸುಧಾಕರ್ ನೂರಕ್ಕೆ ನೂರಷ್ಟು ಜೈಲಿಗೆ ಹೋಗುತ್ತಾರೆ ಎಂದು ಕಿಡಿಕಾರಿದರು.

Join Whatsapp
Exit mobile version