Home ಟಾಪ್ ಸುದ್ದಿಗಳು ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕರಳು, ಪೃಷ್ಟದ ಆರೈಕೆ ಕೇಂದ್ರ ಆರಂಭ: “ಬೆಂಗಳೂರು ಬೌಲ್ ಕೇರ್ ...

ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕರಳು, ಪೃಷ್ಟದ ಆರೈಕೆ ಕೇಂದ್ರ ಆರಂಭ: “ಬೆಂಗಳೂರು ಬೌಲ್ ಕೇರ್ ಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಚಾಲನೆ

ಬೆಂಗಳೂರು; ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಸಮಗ್ರ ಕರುಳಿನ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಚಿಕಿತ್ಸೆ ನೀಡುವ “ಬೆಂಗಳೂರು ಬೌಲ್ ಕೇರ್” ಆರಂಭಿಸಲಾಗಿದೆ.


ಇದು ಮೊದಲ ನಿರ್ದಿಷ್ಟ ಅಂಗಗಳ ಸಮಗ್ರ ಆರೈಕೆ ಕೇಂದ್ರವಾಗಿದ್ದು, ಕರಳು ಮತ್ತು ಪೃಷ್ಠದ ಸಮಸ್ಯೆಗಳಿಗೆ ಪರಿಹಾರ ಒದಗಿಸಲಿದೆ. ಈ ಸೌಲಭ್ಯವನ್ನು ಬೆಂಗಳೂರಿನಲ್ಲಿರುವ ನಾಗರಿಕ ಸಮುದಾಯಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್ ಸಮರ್ಪಿಸಿದರು.
ಇದು ಆಧುನಿಕ ರೋಗಗಳ ಬಗ್ಗೆ ಅರಿವು ಮೂಡಿಸುವ, ಕೊಲಟೈಸ್ ನಿಂದ ಉಂಟಾಗುವ ಕ್ಯಾನ್ಸರ್, ಮಲಬದ್ಧತೆ, ಕರುಳಿನ ಉರಿಯೂತದ ಸಮಸ್ಯೆಗಳು, ಮನೋವಿಜ್ಞಾನದಿಂದ ಮನೋ ಅಂಕಾಲಜಿ ವರೆಗೆ ಹತ್ತು ಹಲವು ವಿಭಿನ್ನ ಚಿಕಿತ್ಸೆಗಳು ಇಲ್ಲಿ ದೊರೆಯಲಿವೆ.


“ಬೆಂಗಳೂರು ಬೌಲ್ ಕೇರ್” ಖ್ಯಾತ ವೈದ್ಯ, ಕೊಲೊರೆಕ್ಟಲ್ ಸರ್ಜನ್ ಡಾ.ನರಸಿಂಹಯ್ಯ ಶ್ರೀನಿವಾಸಯ್ಯ ಅವರ ಕನಸಿನ ಕೂಸು. ಈ ಕೇಂದ್ರ ಕರುಳು ಮತ್ತು ಪೃಷ್ಠದ ಸಮಸ್ಯೆಗಳನ್ನು ಹೊಂದಿರುವವರಿಗೆ ಸಾಮಾನ್ಯ ಜೀವನ ನಡೆಸಲು ಸಹಕಾರಿಯಾಗಲಿದೆ. ಕೊಲೈಟಿಸ್ನಿಂದ ಕ್ಯಾನ್ಸರ್ ಸಮಸ್ಯೆಯೂ ಸಹ ಎದುರಾಗಬಹುದು. ಇದರಿಂದ ಮಲಬದ್ಧತೆ, ಕರುಳಿನ ಉರಿಯೂತ ಮತ್ತಿತರ ರೋಗಗಳಿಗೆ ಕಾರಣವಾಗುವ ಸಾಧ್ಯತೆ ಇರುತ್ತದೆ.

“ಬೆಂಗಳೂರು ಬೌಲ್ ಕೇರ್” ಗೆ ಚಾಲನೆ ನೀಡಿ ಮಾತನಾಡಿದ ಡಾ.ಕೆ. ಸುಧಾಕರ್, ದುರ್ಬಲ ಜೀವನಶೈಲಿ ಹೊಂದಿರುವ, ವಿಶೇಷವಾಗಿ ಇಂದಿನ ಐಟಿ ವೃತ್ತಿಪರರು ಅನೇಕ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. “20-40 ವಯೋಮಾನದವರಲ್ಲಿ ಕೊಲೊರೆಕ್ಟಲ್ ಕ್ಯಾನ್ಸರ್ ಹೆಚ್ಚುತ್ತಿದೆ. ಇದನ್ನು ತಡೆಗಟ್ಟುವಿಕೆ ಗುಣಪಡಿಸುವುದಕ್ಕಿಂತ ಉತ್ತಮ ಮಾರ್ಗವಾಗಿದೆ. ಆರೋಗ್ಯಕರ ಜೀವನಶೈಲಿ, ಸರಿಯಾದ ಆಹಾರ ಕ್ರಮ, ಸರಿಯಾದ ಪೋಷಣೆ, ಸಾಕಷ್ಟು ನಿದ್ರೆ ಮತ್ತಿತರ ಕ್ರಮಗಳ ಮೂಲಕ ಒತ್ತಡ ನಿರ್ವಹಣೆ ಮಾಡಬಹುದು. ಕರುಳನ್ನು ನಮ್ಮ ಎರಡನೇ ಮೆದುಳು ಎಂದು ಕರೆಯಲಾಗುತ್ತದೆ. ನಿಮ್ಮ ಆರೋಗ್ಯವನ್ನು ನೀವು ಚೆನ್ನಾಗಿ ನೋಡಿಕೊಂಡರೆ, ಉತ್ತಮ ಆರೋಗ್ಯವು ನಿಮ್ಮನ್ನು ನೋಡಿಕೊಳ್ಳುತ್ತದೆ. ” ಎಂದು ಕಿವಿ ಮಾತು ಹೇಳಿದರು.


ಸಂಸ್ಥೆಯ ಸಂಸ್ಥಾಪಕ ಡಾ. ನರಸಿಂಹಯ್ಯ ಶ್ರೀನಿವಾಸಯ್ಯ ಮಾತನಾಡಿ, ““ಬೆಂಗಳೂರು ಬೌಲ್ ಕೇರ್” ಸಮಗ್ರ ವಿಧಾನದೊಂದಿಗೆ ಮೀಸಲಾದ ವಿಶೇಷ ಸೇವೆಯಾಗಿದೆ. ನಾವು ನಿಖರವಾದ ಚಿಕಿತ್ಸೆ, ರೋಗ ತಡೆಗಟ್ಟುವ ಕ್ರಮಗಳು, ರೋಗನಿರ್ಣಯ, ಫಿಜಿಯೋಥೆರಪಿ ಮತ್ತು ಪೆಲ್ವಿಕ್ ಫ್ಲೋರ್ ಸೇವೆಗಳು, ಡಯೆಟಿಕ್ಸ್ ಮತ್ತು ನ್ಯೂಟ್ರಿಷನ್, ಸೈಕಾಲಜಿ ಮತ್ತು ಸೈಕೋ-ಆಂಕೊಲಾಜಿಗಳ ಸಂಬಂಧಿತ ಸೇವೆಗಳೊಂದಿಗೆ ಚಿಕಿತ್ಸೆಯನ್ನು ಒದಗಿಸುತ್ತೇವೆ. ಈ ಆರೋಗ್ಯ ವ್ಯವಸ್ಥೆಯು ಅಪೊಲೊ ಆಸ್ಪತ್ರೆಗಳ ಸಮೂಹ ಸಂಸ್ಥೆಯಿಂದ ನಡೆಸಲ್ಪಡುತ್ತದೆ, ಅಪೊಲೊದಿಂದ ಡಯಾಗ್ನೋಸ್ಟಿಕ್ಸ್ ಮತ್ತು ಫಾರ್ಮಸಿ ಜೊತೆಗೆ ಸುಧಾರಿತ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ ಎಂದರು.

Join Whatsapp
Exit mobile version