Home ಟಾಪ್ ಸುದ್ದಿಗಳು ಸಂಸತ್ತಿನ ಆವರಣದಲ್ಲಿದ್ದ ಗಾಂಧಿ, ಅಂಬೇಡ್ಕರ್, ಶಿವಾಜಿ ಪ್ರತಿಮೆಗಳ ದಿಢೀರ್ ಸ್ಥಳಾಂತರ: ಕಾಂಗ್ರೆಸ್ ಕಿಡಿ

ಸಂಸತ್ತಿನ ಆವರಣದಲ್ಲಿದ್ದ ಗಾಂಧಿ, ಅಂಬೇಡ್ಕರ್, ಶಿವಾಜಿ ಪ್ರತಿಮೆಗಳ ದಿಢೀರ್ ಸ್ಥಳಾಂತರ: ಕಾಂಗ್ರೆಸ್ ಕಿಡಿ

ನವದೆಹಲಿ: ಸಂಸತ್ತಿನ ಆವರಣದ ಮುಂಭಾಗದಲ್ಲಿದ್ದ ಮಹಾತ್ಮಗಾಂಧಿ, ಬಿ.ಆರ್.ಅಂಬೇಡ್ಕರ್, ಶಿವಾಜಿ ಸೇರಿದಂತೆ ಇತರರ ಪ್ರತಿಮೆಗಳನ್ನು ಸ್ಥಳಾಂತರಿಸಲಾಗಿದೆ.

ಇದು ಅಮಾನುಷ ಎಂದು ಕಾಂಗ್ರೆಸ್​​ ಪ್ರಧಾನ ಕಾರ್ಯದರ್ಶಿ ಜೈರಾಮ್​ ರಮೇಶ್​ ಪ್ರತಿಕ್ರಿಯಿಸಿದ್ದಾರೆ.

ಮಹಾರಾಷ್ಟ್ರದ ಮತದಾರರು ಬಿಜೆಪಿಗೆ ಮತ ಹಾಕಿಲ್ಲ. ಆದ್ದರಿಂದ ಶಿವಾಜಿ ಮತ್ತು ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಸಂಸತ್ತಿನ ಮೂಲ ಸ್ಥಳದಿಂದ ತೆಗೆದುಹಾಕಿದ್ದಾರೆ ಎಂದು ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಪ್ರತಿಕ್ರಿಯಿಸಿದ್ದಾರೆ.

ಹೊಸದಾಗಿ ಆಯ್ಕೆಯಾದ ಸಂಸದರ ಮೊದಲ ಅಧಿವೇಶನಕ್ಕಾಗಿ ಸಂಕೀರ್ಣವನ್ನು ನವೀಕರಿಸಲು ಸಂಸತ್ತಿನಲ್ಲಿ ಪುನರಾಭಿವೃದ್ಧಿ ಯೋಜನೆಯನ್ನು ಆರಂಭಿಸಲಾಗಿದೆ. ನಾಲ್ಕು ಪ್ರತ್ಯೇಕ ಕಟ್ಟಡಗಳನ್ನು ಒಳಗೊಂಡಿರುವ ಸಂಪೂರ್ಣ ಸಂಕೀರ್ಣವನ್ನು ಏಕೀಕರಿಸುವ ಕೆಲಸ ನಡೆಯುತ್ತಿದ್ದು, ಜೂನ್‌ನಲ್ಲಿ ಸಂಸತ್ತಿಗೆ ಹೊಸ ರೂಪ ನೀಡಲಾಗುವುದು. ಸಂಸತ್ತಿನ ಹೊರ ಪ್ರದೇಶಗಳ ಪುನರಾಭಿವೃದ್ಧಿಯ ಭಾಗವಾಗಿ ಮಹಾತ್ಮ ಗಾಂಧಿ, ಶಿವಾಜಿ ಮತ್ತು ಜ್ಯೋತಿಬಾ ಫುಲೆ ಸೇರಿ ರಾಷ್ಟ್ರೀಯ ನಾಯಕರ ಪ್ರತಿಮೆಗಳನ್ನು ಸ್ಥಳಾಂತರಿಸಲಾಗಿದೆ ಎಂದು ಬಿಜೆಪಿ ತಿಳಿಸಿವೆ.

Join Whatsapp
Exit mobile version