ಮದೀನಾ ಮಸ್ಜಿದ್ ನ ಹಸಿರು ಗುಂಬಜ್ ಗೆ ಇಸ್ರೇಲ್ ಬಾಂಬ್ | ಮತ್ತೊಮ್ಮೆ ವಿಕೃತಿ ಮೆರೆದ ಕುಖ್ಯಾತ ಚಾನೆಲ್ ಸುದರ್ಶನ್ ಟಿವಿ !

Prasthutha|

ಭಾರತದಲ್ಲಿ ಕೋಮುವಾದ ಮತ್ತು ತೀವ್ರಗಾಮಿತನದ ಪರ ಇರುವ ಕುಖ್ಯಾತ ಚಾನೆಲ್ ಸುದರ್ಶನ್ ಟಿವಿ ನಿನ್ನೆ ಮತ್ತೊಮ್ಮೆ ತನ್ನ ಕೋಮು ದ್ವೇಷದ ವಿಷ ಕಾರಿದೆ. ಭಾರತ ದೇಶವು ಇಸ್ರೇಲ್ ಪರ ನಿಲ್ಲಬೇಕೆಂಬ ತನ್ನ ಚಾನೆಲ್ ಕಾರ್ಯಕ್ರಮದಲ್ಲಿ, ಮುಸ್ಲಿಮರ ಪವಿತ್ರ ಮಸೀದಿ ಯಾಗಿರುವ ಮದೀನಾದ ಮಸ್ಜಿದುನ್ನಬವಿಯ ಹಸಿರು ಗುಂಬಜ್ ಗಳ ಮೇಲೆ ಇಸ್ರೇಲಿನ ರಾಕೆಟ್ ಬಾಂಬ್ ಗಳು ಸಿಡಿಯುವ ಅನಿಮೇಟೆಡ್ ದೃಶ್ಯಗಳನ್ನು ಪ್ರಸಾರ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ.

ಈ ಕುರಿತು ಸೌದಿ ಅರೇಬಿಯಾದ ಎರಡು ಪವಿತ್ರ ಮಸೀದಿಗಳನ್ನು ನಿರ್ವಹಿಸುವ ಅಂದರೆ ‘ಹರಮೈನ್’ನ ಅಧಿಕೃತ ಟ್ವಿಟ್ಟರ್ ಖಾತೆ ತನ್ನ ಆಕ್ರೋಶ ವ್ಯಕ್ತಪಡಿಸಿದ್ದು, ಭಾರತದ ಒಂದು ಚಾನೆಲ್ ಮಸ್ಜಿದುನ್ನಬವಿಯ ಹಸಿರು ಗುಂಬಜ್ ಗಳನ್ನು ಇಸ್ರೇಲಿ ರಾಕೆಟ್ ಬಾಂಬುಗಳು ಧ್ವಂಸಗೊಳಿಸುವ ಅನಿಮೇಟೆಡ್ ದೃಶ್ಯಗಳನ್ನು ತನ್ನ ಚಾನೆಲಿನಲ್ಲಿ ಪ್ರಸಾರಿಸಲಾಗಿದೆ. ಹಸಿರು ಗುಂಬಜ್ ಗಳನ್ನು ಫೆಲೆಸ್ತೀನಿನ ಕಟ್ಟಡಗಳ ಮಧ್ಯೆ ಇರುವಂತೆ ನೋಡಿಕೊಳ್ಳಲಾಗಿದೆ. ಇದು ಆ ಚಾನೆಲ್ ತನ್ನ ರೇಟಿಂಗ್ ಗಳನ್ನು ಹೆಚ್ಚಿಸಿಕೊಳ್ಳಲು ಮಾಡಿರುವ ನೀಚ ಕೃತ್ಯವಾಗಿದೆ. ಇದನ್ನು ನಾವು ಖಂಡಿಸುತ್ತೇವೆ, ಮಾತ್ರವಲ್ಲ ಚಾನೆಲ್ ಕೂಡಲೇ ಕ್ಷಮಾಪಣೆಯನ್ನು ಕೊರಬೇಕೆಂದು ನಾವು ಕೇಳಿ ಕೊಳ್ಳುತ್ತಿದ್ದೇವೆ ಎಂದು ಟ್ವೀಟ್ ನಲ್ಲಿ ಹೇಳಿದೆ.

- Advertisement -

ಸುದರ್ಶನ್ ಟಿವಿ ಈ ರೀತಿ ವಿಕೃತಿ ಮರೆಯುತ್ತಿರುವುದು ಇದು ಮೊದಲ ಬಾರಿ ಏನೂ ಅಲ್ಲ. ಈ ಹಿಂದೆ ಐಎಎಸ್ ಪರೀಕ್ಷೆ ಬರೆಯುವ ಮುಸ್ಲಿಂ ಆಕಾಂಕ್ಷಿಗಳ ಕುರಿತು ಕೂಡ ಕಾರ್ಯಕ್ರಮ ನಡೆಸಿ ಕೋಮು ವಿಷ ಕಕ್ಕಿತ್ತು. ಚಾನೆಲ್ ನ ಮುಖ್ಯಸ್ಥನಾಗಿರುವ ಸುರೇಶ್ ಚಾವಾಂಕೆ ತನ್ನ ಮನೆಯಲ್ಲಿ ಮತ್ತು ಕಚೇರಿಯಲ್ಲಿ ಮಾರಕಾಯುಧಗಳನ್ನು ಇಟ್ಟುಕೊಂಡು ಅದನ್ನು ಬಹಿರಂಗವಾಗಿ ಪ್ರದರ್ಶನಕ್ಕಿಟ್ಟು ತಾನೋರ್ವ ಗೂಂಡಾ ಪತ್ರಕರ್ತ ಎನ್ನುವಂತೆ ತನ್ನನ್ನು ಬಿಂಬಿಸಿಕೊಂಡಿದ್ದ.

ಇದೀಗ ಮತ್ತೊಮ್ಮೆ ತನ್ನ ಚಾನೆಲಿನಲ್ಲಿ ಇಸ್ರೇಲಿನ ಭಯೋತ್ಪಾದನೆಯನ್ನು ತೋರಿಸುವಲ್ಲಿ ಮದೀನಾದ ಹಸಿರು ಗುಂಬಜ್ ಗೆ ಇಸ್ರೇಲಿನ ಬಾಂಬ್ ಬಿದ್ದು ಧ್ವಂಸಗೊಳ್ಳುವಂತಹಾ ದೃಶ್ಯಗಳನ್ನು ಪ್ರಸಾರ ಮಾಡಿ ತನ್ನ ಕೋಮು ಮನೋಸ್ಥಿತಿಯ ಪತ್ರಿಕೋದ್ಯಮವನ್ನು ಬಹಿರಂಗಗೊಳಿಸಿದ್ದಾನೆ.

ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಸುದರ್ಶನ್ ಟಿವಿಯ ವಿಕೃತಿಯ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗಿದೆ. ಟ್ವಿಟ್ಟರಿನಲ್ಲಿ #BanSudarshanNews ಎಂಬ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿತ್ತು. ದೇಶದಲ್ಲಿ ನಿರಂತರವಾಗಿ ಜನರ ಮಧ್ಯೆ ಕೋಮುದ್ವೇಷ ಬಿತ್ತುವ ಸುದರ್ಶನ್ ಟಿವಿ ಮತ್ತು ಅದರ ಮುಖ್ಯಸ್ಥನ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸಾರ್ವಜನಿಕರಿಂದ ಆಗ್ರಹ ವ್ಯಕ್ತವಾಗಿದೆ.

https://twitter.com/baburao__aapte/status/1394611125765902341?s=19
- Advertisement -