ಖರ್ತೂಮ್: ಸುಡಾನ್ ನಲ್ಲಿ ಪ್ರಸಕ್ತ ರಾಜಕೀಯ ಬಿಕ್ಕಟ್ಟು ಏರ್ಪಟ್ಟಿದ್ದು, ಕ್ಷಿಪ್ರ ಸೇನಾ ಕ್ರಾಂತಿ ನಡೆದಿದೆ. ಮಾತ್ರವಲ್ಲ ಹಂಗಾಮಿ ಪ್ರಧಾನ ಮಂತ್ರಿಯನ್ನು ಬಂಧಿಸಿದ ಕೆಲವೇ ಗಂಟೆಗಳ ಬಳಿಕ ಜನರಲ್ ಸೋಮವಾರ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಲಾಗಿದೆ.
ಪ್ರಸ್ತುತ ಸುಡಾನ್ ನಲ್ಲಿ ಅಲ್ಲಲ್ಲಿ ಹಿಂಸಾಚಾರ ತಲೆದೋರಿದ್ದು, ದಂಗೆಯಿಂದಾಗಿ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ.
ದೂರದರ್ಶನದ ಭಾಷಣದಲ್ಲಿ ಈ ಕುರಿತು ಮಾತನಾಡಿದ ಜನರಲ್ ಅಬ್ದೆಲ್ – ಫತ್ತಾಹ್ ಬುರ್ಹಾನ್ ಅವರು, ಪ್ರಧಾನಿ ಅಬ್ದುಲ್ಲಾ ಹಮ್ದೋಕ್ ನೇತೃತ್ವದ ಆಡಳಿತಾರೂಢ ಸರ್ಕಾರವನ್ನು ವಿಸರ್ಜಿಸುವುದಾಗಿ ಘೋಷಿಸಿದರು.
ರಾಜಕೀಯ ಬಣಗಳ ನಡುವಿನ ಜಗಳದಿಂದಾಗಿ ಅನಿವಾರ್ಯದಿಂದಾಗಿ ಸೇನೆ ಮಧ್ಯಪ್ರವೇಶಿಸಲು ಪ್ರೇರೇಪಿಸಿದವು ಎಂದು ಜನರಲ್ ತಿಳಿಸಿದ್ದಾರೆ. ದೇಶದ ಪ್ರಜಾಪ್ರಭುತ್ವದ ಪರಿವರ್ತನೆಯನ್ನು ಪೂರ್ಣಗೊಳಿಸಲು ಈ ವೇಳೆ ಅವರು ಪ್ರತಿಜ್ಞೆ ಮಾಡಿದರು.
ವ್ಯಾಪಕ ಹಿಂಸಾಚಾರ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಅಶ್ರುವಾಯು ಬಳಸಿ ಜನರನ್ನು ಚದುರಿಸಲು ಪ್ರಯತ್ನಿಸಿದ್ದರು.
ಘಟನೆಯಿಂದಾಗಿ ಕನಿಷ್ಠ 12 ಮಂದಿ ಪ್ರತಿಭಟನಾಕಾರರು ಗಾಯಗೊಂಡರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.